
ಮಡಿಕೇರಿ ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ ಪಂದ್ಯಗಳು ಮೈದಾನ 2ರಲ್ಲಿ ನಡೆಯುತಿದ್ದು, ಇಂದಿನ ಪಂದ್ಯದಲ್ಲಿ ಮೊದಲಿಗೆ, ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು. ಮುದ್ದಂಡ ಮಿಶಿಕಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಆದೇಂಗಡ ಮತ್ತು ಬೊಳ್ಳೇರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಆದೇಂಗಡ ಗೆಲುವು ದಾಖಲಿಸಿತು. ಆದೇಂಗಡ ಪರ ತಶ್ವಿಕ 2 ಗೋಲು ದಾಖಲಿಸಿದರು. ಬೊಳ್ಳೇರ ಜ್ಯೋತಿ 1 ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಂಬೀರಂಡ ಮತ್ತು ಮಚ್ಚಮಾಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯ ಸಾಧಿಸಿತು. ಕಂಬೀರಂಡ ಪರ ಮಿಲನಾ ಹಾಗೂ ಪೊನ್ನಮ್ಮ ತಲಾ 1 ಗೋಲು ದಾಖಲಿಸಿದರು. ಮಚ್ಚಮಾಡ ಪರ ಪಾಯಲ್ 1 ಗೋಲು ಬಾರಿಸಿದರು. ಮಚ್ಚಮಾಡ ವಿದ್ಯಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ತೀತಿರ ಮತ್ತು ಕೂತಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ತೀತಿರ ತಂಡ ಗೆಲುವು ದಾಖಲಿಸಿತು. ತೀತಿರ ಸಿಂಚನ್ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದರು. ಕೂತಂಡ ಹಿತಾಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಜಯ ಸಾಧಿಸಿತು. ಮುಕ್ಕಾಟಿರ ಪರ ರೇಷ್ಮ ಗೋಲು ಬಾರಿಸಿದರು. ತೀತರಮಾಡ ಕಾವೇರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಣ್ಣುವಂಡ ಮತ್ತು ಕೋಡಿಮಣಿಯಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಸಣ್ಣುವಂಡ ತಂಡ ಜಯ ಸಾಧಿಸಿತು. ಸಣ್ಣುವಂಡ ಪರ ಕೃತಿಕಾ ಹಾಗೂ ಕೋಡಿಮಣಿಯಂಡ ಪರ ದೃಶ್ಯ ತಲಾ 1 ಗೋಲು ದಾಖಲಿಸಿದರು. ಕೋಡಿಮಣಿಯಂಡ ದೃಶ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಂಡೇಪಂಡ ಮತ್ತು ಗುಡ್ಡಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಗುಡ್ಡಂಡ ತಂಡ ಜಯ ಸಾಧಿಸಿತು. ಗುಡ್ಡಂಡ ಪರ ಮೋಕ್ಷ ಹಾಗೂ ಸ್ಫೂರ್ತಿ ತಲಾ 1 ಗೋಲು ದಾಖಲಿಸಿದರು. ಮಂಡೇಪಂಡ ಪರ ಯುವಿನ್ 1 ಗೋಲು ಬಾರಿಸಿದರು. ಮಂಡೇಪಂಡ ದಿಯಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಶಿವಚಾಳಿಯಂಡ ಮತ್ತು ಪಾಡೆಯಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಶಿವಚಾಳಿಯಂಡ ಗೆಲುವು ದಾಖಲಿಸಿತು. ಶಿವಚಾಳಿಯಂಡ ಪರ ದೇಚಕ್ಕ, ಮಾನ್ಯ ಗೋಲು ದಾಖಲಿಸಿದರು. ಪಾಡೆಯಂಡ ಹಿತಶ್ರೀ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಮ್ಮಣಿಚಂಡ ಮತ್ತು ಪಾಡೆಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಪಾಡೆಯಂಡ ಜಯ ಸಾಧಿಸಿತು. ಪಾಡೆಯಂಡ ಪರ ಶ್ವೇತ ಗೋಲು ದಾಖಲಿಸಿದರು. ಅಮ್ಮಣಿಚಂಡ ಪೂವಮ್ಮ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪೊರುಕೊಂಡ ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಪೊರುಕೊಂಡ ತಂಡ ಗೆಲುವು ಸಾಧಿಸಿತು. ಪೊರುಕೊಂಡ ತಂಡದ ಪರ ಗ್ರೀಷ್ಮ ಗೋಲು ದಾಖಲಿಸಿದರು. ಬೊಟ್ಟೋಳಂಡ ಪ್ರಾಚಿ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಿದ್ದಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಜಯ ಸಾಧಿಸಿತು. ಕಲಿಯಂಡ ಪರ ತೇಜಲ್ 2 ಗೋಲು ಬಾರಿಸಿದರು. ಸಿದ್ದಂಡ ಚೈತ್ರ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪಟ್ಟಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಯ್ಯಂಡ ತಂಡ ಜಯ ಸಾಧಿಸಿತು. ಚೆಯ್ಯಂಡ ಪರ ಭಾಗ್ಯಶ್ರೀ 2, ದೇಚಮ್ಮ ಹಾಗೂ ದೀಕ್ಷ ತಲಾ 1 ಗೋಲು ಬಾರಿಸಿದರು. ಪಟ್ಟಡ ವೀಣಾ ಮೊಣ್ಣಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ ಪರ ಸ್ಮಿತಾ ಸುಬ್ಬಯ್ಯ 1 ಗೋಲು ದಾಖಲಿಸಿದರು. ಪರದಂಡ ಮಾನ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಗುಡ್ಡಂಡ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್‌ನಲ್ಲಿ 1-0 ಗೋಲುಗಳ ಅಂತರದಲ್ಲಿ ಸಣ್ಣುವಂಡ ಜಯ ಸಾಧಿಸಿತು. ಗುಡ್ಡಂಡ ಪರ ಗಾಯನ ಎಸ್. ಹಾಗೂ ಸಣ್ಣುವಂಡ ಪರ ಇಶಿತಾ ತಲಾ 1 ಗೋಲು ಬಾರಿಸಿದರು. ಗುಡ್ಡಂಡ ಸುಮಾ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.