
ಮಡಿಕೇರಿ, ಏ.24: ರೋಚಕ ಘಟ್ಟ ತಲುಪಿರುವಕೊಡವ ಒಕ್ಕಡ ಹಾಕಿ ನಮ್ಮೆಯ ಕ್ವಾಕರ್ ಫೈನಲ್‌ನಲ್ಲಿ ನಾಳೆ ಬಲಿಷ್ಟ ತಂಡಗಳು ನಿರ್ಣಾಯಕ ಘಟ್ಟದ ಮೆಟ್ಟಿಲಿಗಾಗಿ ಕಾದಾಡಲಿವೆ. ಬೆಳಿಗ್ಗೆ 9.30 ಗಂಟೆಗೆ ನೆಲ್ಲಮಕ್ಕಡ ಮತ್ತು ಕೂತಂಡ, 11 ಗಂಟೆಗೆ ಮಂಡೇಪಂಡ ಮತ್ತು ಕರವಂಡ ಮಧ್ಯಾಹ್ನ 12.30 ಗಂಟೆಗೆ ಚೆಪ್ಪುಡಿರ ಮತ್ತು ಚೇಂದಂಡ, 2.30 ಗಂಟೆಗೆ ಕುಪ್ಪಂಡ (ಕೈಕೇರಿ) ಮತ್ತು ಪುದಿಯೊಕ್ಕಡ ತಂಡಗಳು ಸೆಮಿ ಫೈನಲ್ ಕನಸಿನೊಂದಿಗೆ ಹೋರಾಡಲಿವೆ.