https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

News, Informatin , Enteetinement and Advertisement
23/04/202523/04/2025nadubadenews@gmail.comLeave a Comment on ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ
Spread the love
ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮಡಿಕೇರಿ, ಏ.23: ನೆಲ್ಲಮಕ್ಕಡ ಮತ್ತು ಕೋಳೇರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ಗೆಲುವು ದಾಖಲಿಸಿತು. ನೆಲ್ಲಮಕ್ಕಡ ಪರ ಸಚಿನ್, ರಾಕೇಶ್ ಸುಬ್ರಮಣಿ, ರೋಶನ್ ಬೋಪಣ್ಣ ಹಾಗೂ ಅಯ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕೋಳೇರ ನಿಶಿಕ್ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೂತಂಡ ಮತ್ತು ಅಮ್ಮಣಿಚಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಕೂತಂಡ ಜಯ ಸಾಧಿಸಿತು. ಕೂತಂಡ ಪರ ಬೋಪಣ್ಣ 4 ಗೋಲು ದಾಖಲಿಸಿ ಗಮನ ಸೆಳೆದರೆ, ಸುರೇಶ್ ಅಪ್ಪಯ್ಯ 1 ಗೋಲು ಬಾರಿಸಿದರು. ಅಮ್ಮಣಿಚಂಡ ಯಶ್ವಂತ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಳಿಯಂಡ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಮಿಥನ್ ಪೊನ್ನಪ್ಪ ಹಾಗೂ ವಿಪನ್ ಸೋಮಯ್ಯ ತಲಾ 1 ಗೋಲು ದಾಖಲಿಸಿದರು. ನಾಳಿಯಂಡ ಪರ ಚರಣ್ ಚಿಣ್ಣಪ್ಪ 1 ಗೋಲು ಬಾರಿಸಿದರು. ನಾಳಿಯಂಡ ರತ್ನ ಬೆಳ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕರವಂಡ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ಕರವಂಡ ಜಯ ಸಾಧಿಸಿತು. ಕರವಂಡ ಪರ ಕೃತನ್ ಅಪ್ಪಚ್ಚು 2 ಗೋಲು ದಾಖಲಿಸಿದರು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಕೌಶಿಕ್ ಕುಶಾಲಪ್ಪ ತಲಾ 1 ಗೋಲು ಬಾರಿಸಿದರು. ಕಾಂಡಂಡ ಕೌಶಿಕ್ ಕುಶಾಲಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Post navigation

ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…
ಮುದ್ದಂಡ ಹಾಕಿ ನಮ್ಮೆ ನಾಳೆ ಮಹಿಳಾ ಕ್ವಾಟರ್ ಫೈನಲ್-ಸೆಮಿ ಫೈನಲ್

Related Posts

ವಸತಿ ಯೋಜನೆ ಆದೇಶ ಪತ್ರ ವಿತರಣಾ ಸಮಾರಂಭ ಮೇ,02 ರಂದು…

29/04/202529/04/2025nadubadenews@gmail.com
ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

21/02/202521/02/2025nadubadenews@gmail.com
ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು  ಎಸ್ಪಿ ಸೂಚನೆ

ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ

16/03/202516/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version