https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್ ಹಾಕಿ ಉತ್ಸವ : ಏ.21 ರಂದು ನಡೆದ ಪಂದ್ಯಾವಳಿ ವಿಜೇತರು

ಮುದ್ದಂಡ ಕಪ್ ಹಾಕಿ ಉತ್ಸವ : ಏ.21 ರಂದು ನಡೆದ ಪಂದ್ಯಾವಳಿ ವಿಜೇತರು

News, Informatin , Enteetinement and Advertisement
21/04/202521/04/2025nadubadenews@gmail.comLeave a Comment on ಮುದ್ದಂಡ ಕಪ್ ಹಾಕಿ ಉತ್ಸವ : ಏ.21 ರಂದು ನಡೆದ ಪಂದ್ಯಾವಳಿ ವಿಜೇತರು
Spread the love
ಮುದ್ದಂಡ ಕಪ್ ಹಾಕಿ ಉತ್ಸವ : ಏ.21 ರಂದು ನಡೆದ ಪಂದ್ಯಾವಳಿ ವಿಜೇತರು

ಮಡಿಕೇರಿ ಏ.21 : ನಾಳಿಯಂಡ ಮತ್ತು ಕೊಂಗೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ನಿಗಧಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ಕೊಂಗೇಟಿರ ರೋಹನ್ ತಿಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೋಟೇರ ಮತ್ತು ಪುದಿಯೊಕ್ಕಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಪುದಿಯೊಕ್ಕಡ ತಂಡ ಜಯ ಸಾಧಿಸಿತು. ಪುದಿಯೊಕ್ಕಡ ಪರ ಪ್ರಧಾನ್ ಸೋಮಣ್ಣ ಹಾಗೂ ಮಿಥನ್ ಪೊನ್ನಪ್ಪ ತಲಾ ಒಂದು ಗೋಲು ದಾಖಲಿಸಿದರು. ಕೋಟೇರ ಪರ ಲೋಕೇಶ್ ಒಂದು ಗೋಲು ಬಾರಿಸಿದರು. ಕೋಟೇರ ಕೌಶಿಕ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆಪ್ಪುಡಿರ ಮತ್ತು ಅಟ್ರಂಗಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ದಾಖಲಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ 2, ನರೇನ್ ಕಾರ್ಯಪ್ಪ, ಗಗನ್ ತಿಮ್ಮಯ್ಯ ಹಾಗೂ ಸಿ.ಕೆ.ಸೋಮಣ್ಣ ತಲಾ ಒಂದು ಗೋಲು ದಾಖಲಿಸಿದರು. ಅಟ್ರಂಗಡ ನರ್ತನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೇಕೇರಿರ ಮತ್ತು ಅಂಜಪರವಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈಬ್ರೇಕರ್ ನಲ್ಲಿ 4-2 ಗೋಲುಗಳ ಅಂತರದಲ್ಲಿ ಅಂಜಪರವಂಡ ತಂಡ ಜಯ ಸಾಧಿಸಿತು. ಮೇಕೇರಿರ ನವೀನ್ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚಂಗುಲಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಗೆಲುವು ಸಾಧಿಸಿತು. ಮೇಚಿಯಂಡ ತಂಡದ ಪರ ಪೃಥ್ವಿ ಗಣಪತಿ ಎರಡು ಗೋಲು ದಾಖಲಿಸಿದರು. ಚಂಗುಲಂಡ ಪರ ಅಜಿತ್ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಬೊಟ್ಟೋಳಂಡ ಮತ್ತು ಚೇಂದಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 4-3 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಗೆಲುವು ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

Post navigation

ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…
ನಮ್ಮ ಸುತ್ತಮುತ್ತ ಪರಿಸರ ಶುಚಿತ್ವ ನಮ್ಮ ಹೊಣೆಯಾಗಲಿ: ಜಿಲ್ಲಾಧಿಕಾರಿ

Related Posts

ಐಇಸಿ ಚಟುವಟಿಕೆಗಳಿಗಾಗಿ ಸ್ವಸಹಾಯ ಗುಂಪು ಸದಸ್ಯರಿಂದ ಅರ್ಜಿ ಆಹ್ವಾನ

22/05/202522/05/2025nadubadenews@gmail.com
ರಸ್ತೆ ಸುರಕ್ಷತಾ ಕ್ರಮಕ್ಕೆ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ

ರಸ್ತೆ ಸುರಕ್ಷತಾ ಕ್ರಮಕ್ಕೆ ಕೆಂಜಂಗಡ ರೋಷನ್‌ ನಾಣಯ್ಯ ಅಭಿಯಾನ

02/05/202502/05/2025nadubadenews@gmail.com
ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

08/03/202508/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version