
ಮಡಿಕೇರಿ ಏ.22: ಮೇಚಿಯಂಡ ಮತ್ತು ಚೇಂದಂಡ 6-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಸುಬ್ಬಿ ಸುಬ್ಬಯ್ಯ 4 ಹಾಗೂ ನಿಖಿನ್ ತಿಮ್ಮಯ್ಯ ಹಾಗೂ ಬಿಪಿನ್ ಬೋಪಣ್ಣ ತಲಾ 1 ಗೋಲು ದಾಖಲಿಸಿದರು. ಮೇಚಿಯಂಡ ವಿನಿತ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಂಜಪರವಂಡ ಮತ್ತು ಚೆಪ್ಪುಡಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ಜಯ ಸಾಧಿಸಿತು. ಚೆಪ್ಪುಡಿರ ಪರ ಚೇತನ್ ಚಿಣ್ಣಪ್ಪ, ವಚನ್ ಚಿಣ್ಣಪ್ಪ, ನರನ್ ಕಾರ್ಯಪ್ಪ ಹಾಗೂ ಪ್ರಣವ್ ತಿಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಅಂಜಪರವಂಡ ಜತನ್ ಅಪ್ಪಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಣ್ಣುವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ಸಾಧಿಸಿತು. ಮಂಡೇಪಂಡ ಪರ ಕವನ್ ಮುತ್ತಪ್ಪ 2, ಚಂಗಪ್ಪ ಹಾಗೂ ನಂಜಪ್ಪ ತಲಾ 1 ಗೋಲು ದಾಖಲಿಸಿದರು. ಸಣ್ಣುವಂಡ ಪರ ಯತಿನ್ ಅಯ್ಯಪ್ಪ 1 ಗೋಲು ಬಾರಿಸಿದರು. ಸಣ್ಣುವಂಡ ಅಯ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಪರದಂಡ ಮತ್ತು ಕುಪ್ಪಂಡ (ಕೈಕೇರಿ) ನಡುವಿನ ಪಂದ್ಯದಲ್ಲಿ 5-2 ಗೋಲಗಳ ಅಂತರದಲ್ಲಿ ಕುಪ್ಪಂಡ ತಂಡ ಗೆಲುವು ಸಾಧಿಸಿತು. ಕುಪ್ಪಂಡ ಪರ ಜಗತ್ 2, ಸೋಮಯ್ಯ, ಪ್ರಧಾನ್, ದ್ಯಾನ್ ತಲಾ 1 ಗೋಲು ದಾಖಲಿಸಿದರು. ಪರದಂಡ ಪರ ಪ್ರಜ್ವಲ್ ಪೂವಣ್ಣ 2 ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.