https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

News, Informatin , Enteetinement and Advertisement
23/03/202523/03/2025nadubadenews@gmail.comLeave a Comment on ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….
Spread the love
ಮುದ್ದಂಡ ಕಪ್‌ಗೆ 24 ಐನ್‌ ಮನೆಯ ನೆಲ್ಲಕ್ಕಿ ತಿರಿ : 128 ಕಿಮಿ 40+ ಓಟಗಾರರು, 50+ ವಾಹನಗಳು  219ಕಿಮಿ ಓಟ….

ಕೊಡವ ಹಾಕಿ ಎಂದರೆ, ಇಡೀ ಕೊಡಗಿಗೇ ಒಂದು ಸಂಭ್ರಮದ ಖಳೆ, ಹಲವು ವಿಶ್ವ ದಾಖಲೆಯನ್ನು ಪಡೆದು, ಪ್ರಪಂಚದ ಅತಿ ದೊಡ್ಡ ಫೀಲ್ಡ್‌ ಹಾಕಿ ಪಂದ್ಯಾಟ ಎಂಬ ಖ್ಯಾತಿಯನ್ನು ಗಳಿಸಿದ ಕೊಡವ ಹಾಕಿ ನಮ್ಮೆಗೆ ಈಗ 25ನೇ ವರ್ಷದ ಸಂಭ್ರಮ. ಈ ಭಾರಿಯ ಉತ್ಸವದ ಜವಾಬ್ದಾರಿ ಹೊತ್ತಿರುವ ಮುದ್ದಂಡ ಒಕ್ಕ, ನಮ್ಮೆಗೆ, ಉತ್ಸವದ ಮೆರಗು ನೀಡಲು, ಮತ್ತಷ್ಟು ಪ್ರಯತ್ನ ಮಾಡುತಿದ್ದು, ಇದಕ್ಕೆ ಪೂರಕವಾಗಿ ಕಳೆದ 24 ವರ್ಷ ಹಾಕಿ ನಮ್ಮೆ ಮಾಡಿದ ಎಲ್ಲಾ ಒಕ್ಕಗಳ ಐನ್‌ ಮನೆಯ ನೆಲ್ಲಕ್ಕಿ ತಿರಿಯೊಂದಿಗೆ 25ನೇ ವರ್ಷದ ನಮ್ಮೆಯ ದಿವ್ಯ ಜ್ಯೋತಿ ಹೊತ್ತಿಸಲು ಅಣಿಯಾಗುತ್ತಿದೆ.

          ಕೊಡವ ಹಾಕಿ ನಮ್ಮೆಯ ಕಾರೋಣ ಎಂದೇ  ಖ್ಯಾತರಾಗಿರುವ ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಹಾಕಿ ನಮ್ಮೆ ಇಂದು ಇಡೀ ಕೊಡವತನದ  ಪ್ರತಿಬಿಂಭವಾಗಿ ಮಾರ್ಪಟ್ಟಿದೆ.  ಪ್ರತೀ  ಕೊಡವರ ಸ್ವಾಭಿಮಾನ ಮತ್ತು ಹೆಮ್ಮೆಯ ಪ್ರತೀಕವಾಗಿ ಬೆಳೆದು ನಿಂತಿದೆ. ಇದರ ಪ್ರಖರತೆ ವರ್ಷದಿಂದ ವರ್ಷಕ್ಕೆ ಮತ್ತಷ್ಟು ಪ್ರಜ್ವಲಿಸುವಲ್ಲಿ, ಕೊಡವರ ಆದಿ ಮೂಲ ಕಾರೋಣರ ಕೃಪಾ ಕಟಾಕ್ಷವೇ ಮೂಲ. ಕೊಡವ ಕುಲದ ಮೊದಲ ಆರಾಧನೆ ಸಲ್ಲುವುದೇ ಆಯಾ ಒಕ್ಕದ ಮಾಗುರು ಕಾರೋಣರಿಗೆ.  ಕೊಡವರ ಪ್ರತೀ ಶುಭ ಕಾರ್ಯಗಳು ಪ್ರಾರಂಭವಾಗುವುದೇ ನೆಲ್ಲಕ್ಕಿ ನಡುಬಾಡೆಯಿಂದ. ಹಾಗಾಗಿಯೇ ಮುದ್ದಂಡ ಒಕ್ಕವೂ, ಕೊಡವ ಹಾಕಿ ನಮ್ಮೆಯ ವಿಶ್ವಮಾನ್ಯೆತೆಗೆ ದುಡಿದ ಎಲ್ಲಾ  ಒಕ್ಕಗಳ ಮಾಗುರು ಕಾರೋಣರ ದಿವ್ಯ ಜ್ಯೋತಿಯನ್ನು ತಂದು 25ನೇ ಹಾಕಿ ನಮ್ಮೆಯನ್ನು ಉದ್ಘಾಟಿಸಲು ಉದ್ದೇಶಿಸಿದೆ.

          ಹಾಕಿನಮ್ಮೆ ಆರಂಭವಾದ ಕರಡ  ಪಾಂಡಂಡ ಒಕ್ಕದಿಂದ ಪ್ರಾರಂಭ :

ಹಾಕಿ ನಮ್ಮೆಯನ್ನು  ಮೊದಲು ಆಯೋಜಿಸಿದ್ದು, ಕಡಿಯತನಾಡ್‌ನ ಕರಡ ಗ್ರಾಮದ ಪಾಂಡಂಡ ಒಕ್ಕ, ಹಾಗಾಗಿ, ದಿನಾಂಕ 25/03/25ನೇ ಮಂಗಳವಾರ, ಪಾಂಡಂಡ ಐನ್‌ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ನಿಂತು, ಮಾಗುರು ಕಾರೋಣರನ್ನು ದೇವಾನು ದೇವತೆಯರನ್ನು ಪ್ರಾರ್ಥಿಸಿ, ನೆಲ್ಲಿಕ್ಕಿ ನೇಲೆಯ ದೀಪದ ತಿರಿಯಿಂದ  ಜ್ಯೋತಿ  ಹೊತ್ತಿಸಿ, ಒಲಂಪಿಕ್‌ ಮಾದರಿಯಲ್ಲಿ ಓಟವನ್ನು ಪ್ರಾರಂಭಿಸಲಾಗುತ್ತದೆ. 

          ಒಕ್ಕ ಜ್ಯೋತಿಯ ಓಟಕ್ಕೆ, ಹಾಕಿ ಕಾರೋಣ, ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಲೀಲಾಕುಟ್ಟಪ್ಪ(ತಾಮನೆ:ಅಮ್ಮಣಿಚಂಡ), ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಚಾಲನೆ ನೀಡಲಿದ್ದಾರೆ.   

          ಅಂದು ಬೆಳಿಗ್ಗೆ 08 ಘಂಟೆಗೆ  ಕರಡ, ಪಾಂಡಂಡ ಐನ್‌ ಮನೆಯಿಂದ ಹೊರಡುವ ಜ್ಯೋತಿಯೊಂದಿಗಿನ ಓಟವು,  10 ಘಂಟೆಗೆ, ಕಿರುಗೂರು ತಲುಪಲಿದೆ. ಕಿರುಗೂರಿನಲ್ಲಿ ಕೊಂಬು ಕೊಟ್ಟ್‌, ತಳಿಯತಕ್ಕಿ ಬೊಳಕ್ಕಾಗಿ, ಚೆಪ್ಪುಡಿರ ಒಕ್ಕದವರು ಮತ್ತು ಸುತ್ತಮುತ್ತಲ ಹಾಕಿ ಆಭೀಮಾನಿಗಳು  ಹಾಕಿ ಜ್ಯೋತಿಯನ್ನು ಸ್ವಾಗತಿಸಿ, ಚೆಪ್ಪುಡಿರ ಐನ್‌ ಮನೆಗೆ ಕರೆದೊಯ್ಯಲಿದ್ದಾರೆ. 10.24ಕ್ಕೆ  ಚೆಪ್ಪುಡಿರ ಐನ್‌ ಮನೆಯ ನೆಲ್ಲಕ್ಕಿಯಿಂದ ಜ್ಯೋತಿಯನ್ನು ಸ್ವೀಕರಿಸಿ ಹೊರಡುವ ಓಟಗಾಗರರು, ಅಲ್ಲಿಂದ ಹೊರಟು  ಸುಮಾರು 12 ಘಂಟೆಗೆ ಅಳಮೇಂಗಡ  ಐನ್‌ ಮನೆ ತಲುಪಲಿರುವ ಹಾಕಿ ಜ್ಯೋತಿಯು, ಅಲ್ಲಿ ನೆಲ್ಲಕ್ಕಿಯಿಂದ ತಿರಿ ಸ್ವೀಕಾರ ಮಾಡಿ, 01.20ಕ್ಕೆ ಮಚ್ಚಮಾಡ, 2.25 ಚೆಕ್ಕೆರ, 2.15 ಕಳ್ಳಿಚಂಡ 4.45ಕ್ಕೆ ಮನೆಯಪಂಡ 6. ಘಂಟೆಗೆ ನಾಂಗಾಲ ಕುಪ್ಪಂಡ, 09 ಘಂಟೆಗೆ ವಿರಾಜಪೇಟೆಗೆ ಬಂದು ತಂಗಲಿದೆ. 

          ದಿನಾಂಕ 26/03/25ರಂದು ಬೆಳಗ್ಗೆ ಆರು ಗಂಟೆಗೆ ವಿರಾಜಪೇಟೆಯಿಂದ ಹೊರಡುವ ಹಾಕಿ ಜ್ಯೋತಿಯು, 07ಘಂಟೆಗೆ ನೆಲ್ಲಮಕ್ಕಡ ಕಾವಡಿ, 3.35ಘಂಟೆಗೆ ಚೆಂಬೆಬೊಳಿಯೂರ್‌ ಈಶ್ವರ ದೇವಸ್ಥಾನ, 8.30ಕ್ಕೇ ಮಂಡೆಪಂಡ, 9.45 ಕುಕ್ಲೂರ್‌ ತಾತಂಡ, 10.20ಕ್ಕೆ ಕೊಡವ ಸಮಾಜ ವಿರಾಜಪೇಟೆ, 11.30 ಅರಮೇರಿ ಮುದ್ದಂಡ, 12.15 ಐಚೆಟ್ಟಿರ, 1.35 ಕಾಕೋಟ್‌ ಪರಂಬು ಮಂಡೇಟಿರ, 2.30ಕ್‌ ಬಲ್ಲಚಂಡ, 4ಕ್ಕೆ ಕರಡ ಕೋಡಿರ, 5.45 ಬಾವಲಿ ಬಿದ್ದಂಡ ಒಕ್ಕದಲ್ಲಿ ಜ್ಯೋತಿಯನ್ನು ಇಟ್ಟು, 7 ವಿರಾಜಪೇಟೆಯಲ್ಲಿ ತಂಗಲಿದೆ.

          ದಿನಾಂಕ 27/03/25, ಮುಂಜಾನೆ 5.45ಕ್ಕೆ ವಿರಾಜಪೇಟೆಯಿಂದ ಹೊರಟು, 6.15‌ಕ್ಕೆ ಬಾವಲಿ ಬಿದ್ದಂಡ ಮನೆಯಿಂದ ಜ್ಯೋತಿ ಪಡೆದು, 7.30ಕ್ಕೆ‌ ಮಾದಂಡ, 8.20 ಕಲಿಯಂಡ, 9.50 ನೆಲ್ಜಿ ಮಾಳೆಯಂಡ, 10.50 ಅಪ್ಪಚೆಟ್ಟೋಳಂಡ 12 ಗಂಟೆಗೆ  ಕುಲ್ಲೇಟಿರ, 1.30 ಬಿದ್ದಾಟಂಡ, 2.50 ಕುಂಡ್ಯೋಳಂಡ ಮನೆಗಳಿಂದ ಜ್ಯೋತಿ ಸ್ವೀಕರಿಸಿ, ಸಂಜೆ 06ಕ್ಕೆ ಶಾಂತೆಯಂಡ, 7.30 ಮಡಿಕೇರಿ ತಲುಪುವ, ಕೊಡವ ಹಾಕಿ ಜ್ಯೋತಿಯೂ, ದಿನಾಂಕ 28/03/25ರಂದು ಜ. ತಿಮ್ಮಯ್ಯ ವೃತ್ತದಿಂದ ಪ್ರಾರಂಭವಾಗುವ ಮುದ್ದಂಡ ಕಪ್‌ ಕೊಡವ ಹಾಕಿ ನಮ್ಮೆಯ ಭವ್ಯ ಮೆರವಣಿಗೆಯೊಂದಿಗೆ, ಫಿ.ಮಾ. ಕಾರ್ಯಪ್ಪ ಮೈದಾನ ಪ್ರವೇಶಿಸುವ ಮೂಲಕ ಕೊಡವ ಹಾಕಿಗೆ ಒಲಂಪಿಕ್‌ ಮಾದರಿಯ ಸ್ಪರ್ಷ ನೀಡುವುದಲ್ಲದೆ, ಎಲ್ಲಾ ಒಕ್ಕದ ಗುರುಕಾರೋಣರ ಪ್ರತೀಕ ವಾದ ದಿವ್ಯ ಜ್ಯೋತಿಯನ್ನ ಕೊಡವ ಹಾಕಿ ನಮ್ಮೆಯ ಶ್ರೀರಕ್ಷೆಯಾಗಿ, ಹಾಕಿ ಪರಿಸರಕ್ಕೆ ಪಸರಿಸಲಿದೆ.  

ಸತತ ಮೂರು ದಿನಗಳ ಕಾಲ ಹಾಕಿ ನಮ್ಮೆ ಆಯೋಜಿಸಿದ ಎಲ್ಲಾ ಒಕ್ಕಗಳಿಗೂ ತೆರಳುವ ಒಲಂಪಿಕ್‌ ಜ್ಯೋತಿ ಮಾದರಿಯ ಈ ಓಟದಲ್ಲಿ ಸುಮಾರು 128 ಕಿಮಿ ದೂರವನ್ನು 40+ ಓಟಗಾರರು ಓಡಿದರೆ, 50+ ವಾಹನಗಳು  219ಕಿಮಿ ಸಂಚರಿಸುವುದು ಮತ್ತೊಂದು ಹೆಮ್ಮೆಯಾಗಿದ್ದು, ಕೊಡವ ಹಾಕಿಯು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲು ಎಲ್ಲಾ ಒಕ್ಕ ಕಾರೋಣರೂ, ಮಾತಾಯಿ ಮಾದೇವರೂ ಆಶೀರ್ವದಿಸಲಿ…

Post navigation

ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ
25ನೇ ಹಾಕಿ ನಮ್ಮೆ ಮುದ್ದಂಡ ಕಪ್‌ರ  ತಿರಿ ಕತ್ತ್‌ಚಿಟ್ಟ ಖನ ಪಟ್ಟವು…

Related Posts

1998 ಕೋಡೀರ ಕಪ್…ಓರ್‌ ನೆಪ್ಪು…

1998 ಕೋಡೀರ ಕಪ್…ಓರ್‌ ನೆಪ್ಪು…

16/04/202516/04/2025nadubadenews@gmail.com
ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

18/06/202518/06/2025nadubadenews@gmail.com
ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

07/03/202507/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version