
ಮುಟ್ಟ, ಜೂ.05: (ndubadenews): ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದ, ಉದಿಯಂಡ ಮೀನಾಳ ಪೋಷಕರಿಗೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ತಮ್ಮ ಸ್ವಂತ ಹಣದಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಗಾಳಿ ಬೀಡು ಪಂಚಾಯಿತಿ ಮುಟ್ಲುಗ್ರಾಮದಲ್ಲಿ ನಿರ್ಮಿಸಿರುವ ಮನೆಯನ್ನು, ದಿನಾಂಕ 09/6/25ನೇ ಸೋಮವಾರ 11.30 ಘಂಟೆಗೆ, ಈ ಹಿಂದಿ ಮಳೆಯ ಕಾರಣಕ್ಕೆ ಮುಂದೂಡಪಲ್ಪಟ್ಟಿದ್ದ ಕಾರ್ಯಕ್ರಮವು ಸೋಮವಾರದಂದು ನಡೆಯಲಿದೆ.
ಅಂದು ಸಾಂಕೇತಿಕವಾಗಿ ನಡೆಯುವ ಕಾರ್ಯಕ್ರಮದಲ್ಲಿ, ಶಾಕರು, ಗರ್ವಾಲೆ ಕೊಡವ ಸಮಾಜ, ಏಳ್‌ನಾಡ್ ಕೊಡವ ಸಂಘ ಬೆಂಗಳೂರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ದಿ.ಮೀನಾಳ ಪೋಷಕರಿಗೆ ಮನೆಯ ಕೀ ಹಸ್ತಾಂತರ ಮಾಡಲಿದ್ದಾರೆ.
ಈ ಕುರಿತು ನಡುಬಾಡೆಯೊಂದಿಗೆ ಮಾತನಾಡಿದ ಶಾಸಕ ಡಾ. ಮಂಥರ್ ಗೌಡ ಅವರು, ತನ್ನ ವಿವಾಹ ನಿಷ್ಚಿತಾರ್ತ ಮತ್ತು ತನ್ನ ಹನ್ನನೇ ತರಗತಿ ಫಲಿತಾಂಶ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ತನ್ನ ಭಾವೀ ಪತಿಯಿಂದಲೇ ಹತ್ಯೆಯಾದ ಭೀಕರತೆಯನ್ನು ನೆನೆನದು ಮರುಗಿದರಲ್ಲದೆ, ಇಂತ ಸಂದರ್ಭದಲ್ಲಿ ಮಗಳನ್ನು ಕಳೆದುಕೊಂಡ ಪೋಷಕರಿಗೆ ನೈತಿಕ ಸ್ಥೈರ್ಯ ತುಂಬಲು, ನನ್ನ ಸ್ವಂತ ಹಣದಿಂದ ಮನೆ ನಿರ್ಮಿಸಿಕೊಡಲಾಗಿದೆ. ಮುಂದೆ ನಾಗರೀಕ ಪ್ರಪಂಚದಲ್ಲಿ ಇಂತ ಘಟನೆಗಳು ನಡೆಯದಿರಲಿ ಎಂದು ಆಶಿಸಿದರು.
ಬಾಲಕಿ ಉದಿಯಂಡ ಮೀನ ಹತ್ಯೆಯಾದ ಸಂದರಭದಲ್ಲಿ ಗರ್ವಾಲೆ ಕೊಡವ ಸಮಾಜ ಮತ್ತು ಏಳ್‌ನಾಡ್ ಸಂಘ ಬೆಂಗಳೂರಿನ ಪದಾಧಿಕಾರಿಗಳು, ಶಾಸಕ ಮಂಥರ್ ಗೌಡರಿಗೆ, ಮನವಿ ಸಲ್ಲಿಸಿ, ಸೂಕ್ತ ತನಿಖೆಯೊಂದಿಗೆ ಕುಟುಂಬಕ್ಕೆ ಆಶ್ರಯ ನೀಡಬೇಕೆಂದು ಆಗ್ರಹಿಸಿದ್ದರು. ಮನವಿಕೊಟ್ಟವರನ್ನೂ ಜೊತೆಯಲ್ಲೇ ಸೇರಿಸಿಕೊಂಡು ಮನೆ ವಿತರಿಸುತ್ತಿರುವ ಶಾಸಕರ ನಡೆಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.