ವಿರಾಜಪೇಟೆ, ಡಿ.10: ಕರ್ನಾಟಕದ ಮಾಜೀ ಮುಖ್ಯ ಮಂತ್ರಿ, ಮಾಜೀ ವಿದೇಶಾಂಗ ಸಚಿವರೂ ಆಗಿದ್ದ,ಸಜ್ಜನ ರಾಜಕಾರಣೀ ಎಂದೇ ಖ್ಯಾತರಾಗಿದ್ದ, ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯ ಜೊತೆಗೆ ನಾಳೆ(11/12/2024) ಬುಧವಾರ ಒಂದಿ ದಿನ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು,ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.
ಮೃತರ ಗೌರವಾರ್ಥ 10/12/24ರಿಂದ 12/12/24ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಮತ್ತು ಈ ಮೂರು ದಿನ ರಾಜ್ಯದಲ್ಲಿ ಯಾವುದೇ ಸರ್ಕಾರಿ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಿಷೇದಿಸಿದೆ. ಜೊತೆಗೆ ನಾಳೆ ಒಂದು ದಿನ ರಾಜ್ಯ ಸರ್ಕಾರಿ ರಜೆಯನ್ನು ಘೋಷಿಸಿ ಅಧಿಕೃತ ಆದೇಶ ಮಾಡಿದೆ.