https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ

ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ

Uncategorized
05/01/202505/01/2025nadubadenews@gmail.comLeave a Comment on ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ
Spread the love
ಮಲ್ಲಳ್ಳಿ ಫಾಲ್ಸ್‌ಗೆ ಅಂದಾಜು 300 ಕೋಟಿ ವೆಚ್ಚದ ರೋಪ್ ವೇ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ: ಇದು ಶಾಸಕ ಮಂಥರ್‌ ಗೌಡ ಪ್ರಯತ್ನದ ಫಲ
ಸಾಂದರ್ಭಿಕ ಚಿತ್ರ

            ಸೋಮವಾರಪೇಟೆ, Nadubadenews ಜ.05: ಸೋಮವಾರಪೇಟೆ ತಾಲೂಕಿನ ಸುಪ್ರಸಿದ್ದ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತ ವೀಕ್ಷಣೆಗೆಯೊಂದಿಗೆ ಪ್ರಕೃತಿಯ ಸೊಬಗನ್ನು ಸವಿಯಲು ಅನುಕೂವಾಗುವಂತೆ, ರೋಪ್‌ ವೇ  ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.  ಈ ವಿಚಾರವಾಗಿ ನಡುಬಾಡೆಯೊಂದಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಅವರು,  2024-25ನೇ ಸಾಲಿನ ಮುಂಗಡ ಪತ್ರದಲ್ಲಿ ಪ್ರವಾಸೋದ್ಯಮ ಅಭೀವೃದ್ದಿಗೆ ಅನುವಾಗುವಂತೆ ರೋಪ್‌ವೇ ನಿರ್ಮಿಸುವ ಘೋಷಣೆ ಮಾಡಲಾಗಿತ್ತು.  ಇದರ ತ್ವರಿತ ಅನುಷ್ಟಾನಕ್ಕೆ ಪ್ರವಾಸೋದ್ಯಮ ಸಚಿವರಾದ ಮಾನ್ಯ ಹೆಚ್.ಕೆ.ಪಾಟೀಲ್ ಅವರೊಂದಿಗೆ ತಾನು ನಿರಂತರ ಸಂಪರ್ಕ ಸಾಧಿಸಿ ಅನುಮೋದನೆ ಕೊಡಿಸಲಾಗಿದೆ ಎಂದರು.

            ಈ ಯೋಜನೆಯು ಅಂದಾಜು 300  ಕೋಟಿ ವೆಚ್ಚದ್ಲಲಿ ಅನುಷ್ಠಾನಕ್ಕೆ ಬರಲಿದ್ದು, ಕೆಲವೇ ದಿನಗಳಲ್ಲಿ ಡಿಪಿಆರ್‌ ತಯಾರಾಗಲಿದೆ ಎಂದ ಶಾಸಕರು, ಈ  ಯೋಜನೆಯಿಂದ ಸೋಮಾವಾರಪೇಟೆ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಲಿದ್ದು, ಪ್ರಾವಾಸೋದ್ಯಮ ಮತ್ತಿತರ ಉದ್ಯಮಕ್ಕೂ ಪ್ರೇರಣೆಯಾಗಲಿದೆ. ಒಬ್ಬ ಜನ ಸೇವಕನಾಗಿ  ನನ್ನ ಕ್ಷೇತ್ರದ ಜನರ ಸಂತೋಷವೇ ನನ್ನ ಆತ್ಮ ತೃಪ್ತಿ ಎಂದು ಶಾಸಕ ಮಂಥರ್‌ ಗೌಡ ಅವರು ಹರ್ಷ ವ್ಯಕ್ತಪಡಿಸಿದರು.

            ಕೊಡಗು ಜಿಲ್ಲೆಯ ಮಲ್ಲಳ್ಳಿ ಫಾಲ್ಸ್‌ ಜೊತೆಗೆ, ಯಾದಗಿರಿಯ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ, ತುಮಕೂರು ಜಿಲ್ಲೆಯ ಮಧುಗಿರಿ ಏಕಶಿಲಾ ಬೆಟ್ಟ, ಸವದತ್ತಿ ಯಲ್ಲಮ್ಮನ ಗುಡ್ಡ, ಹಾವೇರಿ ಜಿಲ್ಲೆಯ ದೇವರಗುಡ್ಡ, ಗದಗ ಜಿಲ್ಲೆಯ ಹೊಳಲಮ್ಮನ ದೇವಸ್ಥಾನ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ, ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಗದಗ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಯಾದಗಿರಿ ಕೋಟೆ, ಬಳ್ಳಾರಿ ಕೋಟೆ, ಸರಕಾರದಿಂದ ರೋಪ್‌ ವೇ ಅಥವಾ ಕೇಬಲ್‌ ಕಾರ್‌ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ತೀರ್ಮಾನಿಸಲಾಗಿದೆ

Post navigation

ಸಾಲತೀರಿಸಿ ಎರಡು ವರ್ಷದ ನಂತರ ಚಿಕ್ಕಮಗಳೂರು ರೈತನಿಗೆ ಬ್ಯಾಂಕ್‌ ನೋಟೀಸ್‌ : ಮನುಸೋಮಯ್ಯ ಗುಡುಗಿಗೆ NOC ಸಲ್ಲಿಕೆ
ಒಯಿಂಜಿ ಪೋನ, ಪೆರಿಯ ಜಾನಪದ ಅರಿಯ, ಪಂಜೇರಿರ ಬೊಳ್ಯಪ್ಪ : ಕೊಡವಾಮೆರ ಕೊಂಡಾಟ ಬೇಜಾರ್

Related Posts

ಕೊಡವ ದೀಬಂಧು ಚಾರಿಟೇಬಲ್‌ ಟ್ರಸ್ಟ್ – ಗರೀಬ ಕೊಡವ ಮಕ್ಕ ಓದೋಕ್‌ ಪಣಸಾಯಕ್‌ ಅರ್ಜಿ ಕಾಕಿತ್…

25/09/202425/09/2024nadubadenews@gmail.com
ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಆರಾಧ್ಯ ಡ್ರೈವಿಂಗ್‌ ಸ್ಕೂಲ್‌, ಮಾದಾಪುರ ಅವರ ಶುಭಾಷಯಗಳು…

ಸಮಸ್ತ ಜನತೆಗೆ ಆಯುಧ ಪೂಜೆ ಮತ್ತು ವಿಜಯ ದಶಮಿಗೆ ಆರಾಧ್ಯ ಡ್ರೈವಿಂಗ್‌ ಸ್ಕೂಲ್‌, ಮಾದಾಪುರ ಅವರ ಶುಭಾಷಯಗಳು…

11/10/202411/10/2024nadubadenews@gmail.com
ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

02/01/202502/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version