ನಡುಬಾಡೆ ನ್ಯೂಸ್, ವಿರಾಜಪೇಟೆ ಸೆ.30: ಮಲೆಯಾಳಂ ಭಾಷೆಯಲ್ಲಿ ಪುಸ್ತಕ ರಚಿಸಿ ಬಿಡುಗಡೆ ಮಾಡಿದ ಪಂಚಭಾಷಾ ಸಾಹಿತಿ, ಷಡ್ಬಾಷಾ ಕವಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರಿಗೆ ಮಲೆಯಿಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವಿರಾಜಪೇಟೆ, ಮೀನ್ ಪೇಟೆಯ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಆಶ್ರಯದಲ್ಲಿ ನಡೆದ 16ನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ, ಮಲೆಯಾಳಂ ಭಾಷೆಯಲ್ಲಿ “ಜೀವಿತತ್ತಿಂಡೆ ನಿರಂಙಳ್”(ಬದುಕಿನ ಬಣ್ಣಗಳು) ಎಂಬ ಪುಸ್ತಕ ರಚನೆ ಮಾಡಿ, ಮಲೆಯಾಳಂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಹಿರಿಯ ಸಾಹಿತಿ ಕಾವೇರಿ ಉದಯ ಅವರನ್ನ ಸನ್ಮಾನದೊಂದಿಗೆ ಗೌರವಿಸಿದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಶ್ರೀ ಎ.ಎಸ್. ಪೊನ್ನಣ್ಣ ವಿಧಾನ ಪರಿಷತ್ ಶಾಸಕರಾದ ಶ್ರೀ ಎಂ.ಪಿ. ಸುಜಾ ಕುಶಾಲಪ್ಪ ಕೊಡಗು ಮಲೆಯಾಳಿ ಸಮಾಜ ಅಧ್ಯಕ್ಷ ಶ್ರೀ ವಿ.ಎಂ. ವಿಜಯ, ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಅಧ್ಯಕ್ಷ ಶ್ರೀ ಸುಮೇಶ್ ಪಿ.ಜಿ. ಸೇರಿದಂತೆ ಗಣ್ಯರು ಹಾಗೂ ಮಲೆಯಾಳಿ ಸಮಾಜ ಸದಸ್ಯರು ಉಪಸ್ಥಿತರಿದ್ದರು.