https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

Uncategorized
04/01/202504/01/2025nadubadenews@gmail.comLeave a Comment on ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.
Spread the love
ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

ವಿರಾಜಪೇಟೆ:ಜ.04: (ಕಿಶೋರ್‌ ಕುಮಾರ್‌ ಶೆಟ್ಟಿ) ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವು ಶ್ರಧ್ದಾ ಭಕ್ತಿಯಿಂದ ಜರುಗಿತು.

ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ನಡೆಸಲಾದ, ವಾರ್ಷಿಕ ಮಹೋತ್ಸವವು ದಿನಾಂಕ 01-01-2025ರ ರಾತ್ರಿ ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಪೂಜೆಯೋಂದಿಗೆ ಕೊನೆಗೊಂಡಿತು.  ತಾ 25ರಂದು ಕ್ಷೇತ್ರ ಪಾಲಕ ಗುಳಿಗನ ಪೂಜೆಯೋಂದಿಗೆ ಆರಂಭವಾದ  ಉತ್ಸವ, ತಾ 26 ರಂದು ಧ್ವಜ ಆರೋಹಣ ಮತ್ತು ಮಂಡಲ ಪೂಜೆ ನಡೆಯಿತು. ತಾ.30,31 ರಂದು ಸಂಜೆ ವಿಶೇಷ ಪೂಜೆಗಳು ನಡೆದವು. ದಿನಾಂಕ 01-01-2025 ರಂದು ಮುಂಜಾನೆ, ಗಣಪತಿ ಹೋಮ ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ ನಡೆಯಿತು. ಬೆಳಿಗ್ಗೆ 09 ಗಂಟೆಗೆ ತುಲಾಭಾರ ಸೇವೆ 10 ಗಂಟೆಗೆ ಶ್ರೀ ಅಯ್ಯಪ್ಪನ ಮಾಲಧಾರಿಗಳಿಂದ ಲಕ್ಷಾರ್ಚನೆ ಸೇವೆ ನಡೆಯಿತು. ಪಡಿಹಾಡು ನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಮಾಹಾಪೂಜೆ, ಮಂಗಳಾರತಿ ಸೇವೆ ನಡೆಯಿತು. ಬಳಿಕ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಕಾರ‍್ಯಕ್ರಮ ನಡೆಯಿತು.

ದಿನದ ಮಹತ್ವಕ್ಕೆ ಅನುಗುಣವಾಗಿ ರಾತ್ರಿ ಶ್ರೀ ಅಯ್ಯಪ್ಪನ ಉತ್ಸವ ಮೂರ್ತಿಯ ಶೋಭಾಯತ್ರೆ ಅರಂಭವಾಯಿತು. ಮೆರವಣಿಗೆಯಲ್ಲಿ ಬಾಲ ಅಯ್ಯಪ್ಪನ ಚಲನವಲನ ಉಳ್ಳ ಉತ್ಸವ ಮೂರ್ತಿ‍್ತಿ,  ಮತ್ಸ್ಯ ಅವತಾರದ ಸ್ತಬ್ದ ಚಿತ್ರ ಕೇರಳದ ಚಂಡೆಮದ್ದಳೆ, ಶ್ರೀ ಅಯ್ಯಪ್ಪ ಮಾಲಾಧಾರಿಗಳಿಂದ ಭಜನೆಯು ಶೋಭಾಯಾತ್ರೆಗೆ ಮೆರೆಗು ನೀಡಿತು.  ಮೆರವಣಿಗೆಯು ತೆಲುಗರ ಬೀದಿ ಜೈನರ ಬೀದಿ, ಎಫ್.ಎಂ.ಸಿ ರಸ್ತೆ ಮಲಭಾರ್ ರಸ್ತೆಯಲ್ಲಿ ಸಾಗಿ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಕೊನೆಗೊಂಡಿತ್ತು.

ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಆಗಮಿಸಿದ ಶ್ರೀ ಅಯ್ಯಪ್ಪ ವೃತ ಮಾಲಾಧಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಕಾರಿಗಳು ಶ್ರೀ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಪುನೀತರಾದರು.

Post navigation

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ
ಕೆದಮುಳ್ಳೂರು ಪ್ಯಾಕ್ಸ್: ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಅಯ್ಯಪ್ಪ

Related Posts

ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

ತಿನ್ನುವಾಗ ಮಾತನಾಡುವುದರಿಂದ, ಅವಸರದಲ್ಲಿ ತಿನ್ನುವುದರಿಂದಲೂ ಸಾವು ಸಂಭವಿಸಬಹುದು ಎಚ್ಚರ…

02/10/202402/10/2024nadubadenews@gmail.com
ದೇಶ ದ್ರೋಹಿ ವಿದ್ಯಾಧರನ ವಿರುದ್ದ ನಾಳೆ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ…

ದೇಶ ದ್ರೋಹಿ ವಿದ್ಯಾಧರನ ವಿರುದ್ದ ನಾಳೆ ಮಡಿಕೇರಿಯಲ್ಲಿ ಭಾರೀ ಪ್ರತಿಭಟನೆ…

05/12/202405/12/2024nadubadenews@gmail.com

ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

27/12/202427/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us