https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

News, Informatin , Enteetinement and Advertisement
03/03/202503/03/2025nadubadenews@gmail.comLeave a Comment on ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ
Spread the love
ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ವಿರಾಜಪೇಟೆ, ಮಾ.03:  2018ರ  ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವ ನೈಜ ಫಲಾನುಭಾವಿಗಳು, ಜಿಲ್ಲಾಡಳಿತಕ್ಕೆ ಕುದ್ದು ಲಿಖಿತ ಮನವಿ ಸಲ್ಲಿಸಿದರೆ, ಕಾನೂನು ವ್ಯಾಪ್ತಿಯಲ್ಲಿ ಮರು ಪರಿಶೀಲನೆ ಮಾಡಲು ಸೂಚಿಸುವುದಾಗಿ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಹೇಳಿದ್ದಾರೆ.

20218ರ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ಮನೆ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ಹಲವಾರು ನೈಜ ಸಂತ್ರಸ್ಥರನ್ನು ಕೈ ಬಿಟ್ಟು, ಉಳ್ಳವರಿಗೆ ಮತ್ತು ಜನ ಪ್ರತಿನಿಧಿಗಳ ಆಪ್ತರಿಗೆ ಮನೆ  ನೀಡಲಾಗಿದೆ, ಎಂಬ ಆರೋಪ ದಿನೇ ದಿನೇ ಹೆಚ್ಚಾಗುತ್ತಿದ್ದು, ನ್ಯಾಯ ದೊರಕದಿದ್ದರೆ ಕಾನೂನು ಮೊರೆ ಹೋಗಲಾಗುವುದೆಂದು ಹಲವಾರು ತಮ್ಮ ಅಸಮಧಾನ ಹೊರ ಹಾಕುತಿದ್ದು, ಈ ಕುರಿತು ನಡುಬಾಡೆ ನ್ಯೂಸ್‌ ದೂರವಾಣಿ ಮೂಲಕ ಶಾಸಕರ ಅಭಿಪ್ರಾಯ ಬಯಸಿದಾಗ, ಮಾತನಾಡಿದ ಶಾಸಕರು, ಅನ್ಯಾಯ ಆಗಿದೆ ಎಂಬ ವಿಚಾರವಾಗಿ ಹಲವರು ತನ್ನ ಗಮನಕ್ಕು ತಂದಿದ್ದು, ಇದನ್ನು ಕಾನೂನಿನ ಅಡಿಯಲ್ಲಿ ಏನು ಮಾಡಬಹುದು ಎಂಬುದರ ಕುರಿತು ಚಿಂತಿಸಲಾಗುವುದು, ಯಾರೀಗೂ ಅನ್ಯಾಯ ಆಗಬಾರದು ಎಂಬುದು ತಮ್ಮ ಆಶಯವಾಗಿದ್ದು, ಸಂಬಂಧಿಸಿದವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದರೆ ಮರು ಪರಿಶೀಲನೆ ಮಾಡಲು ಕಾನೂನು ವ್ಯಾಪ್ತಿಯಲ್ಲಿ ಪ್ರಯತ್ನಿಸುವಂತೆ ಸೂಚಿಸಲಾಗುವುದು ಎಂದರು.

ಈ ಮನೆಗಳ ಆಯ್ಕೆ ಪ್ರಜಕೃಯೆಯಲ್ಲಿ 2018ರಿಂದ ಈ ವರೆಗೂ ಹಲವಾರು ಮಾನದಂಡಗಳನ್ನು ಅಳವಡಿಸಿಕೊಂಡು, ಹಲವು ಸುತ್ತುಗಳ ಪರಿಶೀಲನೆಯ ನಂತರವೇ ಅಂತಿಮ ಆಯ್ಕೆ ನಡೆದಿದೆ. ಒಂದುವೇಳೆ ಆಯ್ಕೆ ಸರಿ ಇಲ್ಲದಿದ್ದರೆ, ತಕರಾರು ಸಲಲಿಸಲು ನೀಡಿದ್ದ ಸಮಯಾವಕಾಶದಲ್ಲಿಯೇ, ಸಾರ್ವಜನಿಕರು ತಮ್ಮ ಪುಕಾರು ಸಲ್ಲಿಸಿದ್ದರೆ, ಅಂದೇ ಸರಿಪಡಿಸಿಕೊಳ್ಳುವ ಅವಕಾಶ ಇರುತಿತ್ತು. ಇದೀಗ ಮನೆಗಳ ಆಯ್ಕೆ ಪರಕ್ರಿಯೆ  ಮುಗಿದಿದ್ದು, ಕೀ ಹಂಚಿಕೆ ಮಾತ್ರ ಉಳಿದಿದೆ ಆದರೂ ಲಿಖಿತ ದೂರುಗಳು ಬಂದಲ್ಲಿ ಮತೊಮ್ಮೆ ನಿಯಮದಡಿ ಪ್ರಯತ್ನಿಸಲಾಗುವುದು ಎಂದ ಶಾಸಕರು, ನ್ಯಾಯಲಾಯದ ಮೊರೆ ಹೋಗುವುದಕ್ಕಿಂತ ಜಿಲ್ಲಾಡಳಿತದೊಂದಿಗೆ ಸಮರ್ಪಕವಾಗಿ ಮಾತುಕಥೆ ಮಾಡಿ ಬಗೆಹರಿಸಿಕೊಂಡರೆ, ಮತ್ತಷ್ಟು ವಿಳಂಬವಾಗುವುದನ್ನು ತಡೆಯಬಹುದು, ಅಧಿವೇಶನ ಮುಗಿದ ನಂತರ ಸಂತ್ರಸ್ಥರು ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಲಾಗುವುದು ಎಂದಿದ್ದಾರೆ.

Post navigation

ಕೊಡವ ಆಯಿಮೆಲ್‌ ಕಳ್ಳ್‌ ಅನಿವಾರ್ಯವಾ, ಅವಶ್ಯವಾ….?!!
ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…

Related Posts

ಮೂರ್ನಾಡ್  ಕೊಡವ ಸಮಾಜತ್  ಆಟ್ ಪಾಟ್  ಪಡಿಪು…

ಮೂರ್ನಾಡ್  ಕೊಡವ ಸಮಾಜತ್  ಆಟ್ ಪಾಟ್  ಪಡಿಪು…

07/05/202507/05/2025nadubadenews@gmail.com
ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.

ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.

19/06/202519/06/2025nadubadenews@gmail.com
ಪ್ರತಿಷ್ಟಿತ  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಎಸ್.ಪಿ ಸೇರಿದಂತೆ ಮೂವರು ಅಧಿಕಾರಿಗಳು…

ಪ್ರತಿಷ್ಟಿತ  ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಕೊಡಗು ಎಸ್.ಪಿ ಸೇರಿದಂತೆ ಮೂವರು ಅಧಿಕಾರಿಗಳು…

20/05/202520/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version