https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

News, Informatin , Enteetinement and Advertisement
16/03/202516/03/2025nadubadenews@gmail.comLeave a Comment on ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ
Spread the love
ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ, ಮಾ.16:-  ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾ ಜೆವರೆಗೆ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿ ಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ವಾಲಯ ಅನುಮೋದನೆ ನೀಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಮಳೆಗಾಲದಲ್ಲಿ ಭೂಕುಸಿತದ ಅಪಾಯವಿರುವ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಎಂಜಿನಿಯರಿಂಗ್ ವಿಭಾಗದ ಕೋರಿಕೆಗೆ, ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, 94 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ. ಮಡಿಕೇರಿಯ ಸಂಪಿಗೆಕಟ್ಟೆ ಸಮೀಪದ ಅಪಾಯಕಾರಿ ತಿರುವುಗಳ ಆಗಲೀಕರಣ ಸೇರಿದಂತೆ, ಡಿಸಿ ಕಚೇರಿ ಎದುರು (ಎಡಭಾಗ), ಕರ್ತೋಜಿ ಗುಡ್ಡ ಕುಸಿತ ಸ್ಥಳ, ಪಯಸ್ವಿನಿ ನದಿ ಕಣಿವೆ ಭಾಗ, ದೇವರಕೊಲ್ಲಿ ಬಳಿ, 2ನೇ ಮೊಣ್ಣಂಗೇರಿ ಸೇರಿದಂತೆ ಒಟ್ಟು 21 ಕಡೆಗಳಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ. ಈ ಸಂಬಂಧ 2021-22ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮಡಿಕೇರಿ ಉಪ ವಿಭಾಗದಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಕೇಂದ್ರದಿಂದ ಈಗ ಅನುಮೋದನೆ ಸಿಕ್ಕಿದೆ. 2018ರಲ್ಲಿ ಸಂಭವಿಸಿದ ಭಾರಿ ಭೂಕುಸಿತಗಳ ಬಳಿಕ 2019ರಲ್ಲಿ ಮಡಿಕೇರಿ-ಸಂಪಾಜೆ ಘಾಟಿ ರಸ್ತೆ (ರಾಷ್ಟ್ರೀಯ ಹೆದ್ದಾರಿ275)ಯ ಭೂಕುಸಿತ ಸ್ಥಳಗಳು.

 ಈ ಸಂಬಂಧ ಟೆಂಡ‌ರ್ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಕಾಮಗಾರಿ ಆರಂಭವಾಗಲಿದೆ. ಈ ತಡೆ ಗೋಡೆಗಳ ನಿರ್ಮಾಣದಿಂದ ಸಂಪಾಜೆ ಘಾಟಿ ರಸ್ತೆಯಲ್ಲಿ ಪ್ರತಿ ಮಳೆಗಾಲ ದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಲಿದೆ.

ಪ್ರತಿ ವರ್ಷ ಪ್ರತಿ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ಸಂಪಾಚೆ ಘಾಟಿ ರಸ್ತೆಯಲ್ಲಿ ಸಂಪರ್ಕ ಕಡಿತ ಭೂಕುಸಿತಗಳು ಸಂಭವಿಸುತ್ತಿವೆ. ಕೆಲವು ಸಲ ರಸ್ತೆಯೇ ಕೊಚ್ಚಿ ಹೋಗಿದ್ದು, ಹಲವು ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ನಿರಂತರ ಭೂಕುಸಿತದ ಅಪಾಯವಿರುವ ಕಾರಣ ಹೆಚ್ಚು ಮಳೆಯಿದ್ದಾಗ ಪ್ರತಿ ಸಲ ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಹಲವು ಸಲ  ರಸ್ತೆಯನ್ನೇ ಸಂಪೂರ್ಣ ಬಂದ್ ಮಾಡಿದ ಉದಾಹರಣೆಗಳಿವೆ. ಈ ತಡೆಗೋಡೆಗಳ ನಿರ್ಮಾಣದಿಂದ ಈ ಸಮಸ್ಯೆಗೆ ಬಹುತೇಕ ಪರಿಹಾರ ಸಿಗುವ ನಿರೀಕ್ಷೆಯಿದೆ.

ಈ ಹಿಂದೆ ಈ ಭಾಗದಲ್ಲಿ ಒಟ್ಟು 48 ಕೋಟಿ ರೂ. ವೆಚ್ಚದಲ್ಲಿ 18 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಬಳಿಕ ನಿರಂತರ ಭೂಕುಸಿತಗಳ ಸಂಬಂಧ ಅಧ್ಯಯನ ನಡೆಸಿದ ತಜ್ಞರು ಹಾಗೂ ಎಂಜಿನಿಯರ್‌ಗಳ ತಂಡ ಇನ್ನೂ 21 ಸೂಕ್ಷ್ಮ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಲು ಶಿಫಾರಸು ಮಾಡಿತ್ತು.

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್…17
ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

Related Posts

ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

ಓಡಿಯಂಡ ರೋಹಿಣಿ ದೇಚಮ್ಮಂಗ್‌ ನಲ್ಲಾಮೆ

01/06/202501/06/2025nadubadenews@gmail.com
ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

28/02/202528/02/2025nadubadenews@gmail.com
ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

29/04/202529/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version