
ಮಡಿಕೇರಿ,ಜು.11; (nadubadenews): ಮಡಿಕೇರಿಯಲ್ಲಿ ನಗರಸಭೆ ವತಿಯಿಂದ ಪ್ರತಿ ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದರು. ಆದರೆ ಇತ್ತೀಚೆಗೆ, ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಕಸವವನ್ನು ನಿತ್ಯ ಸ್ಗಹರಹಿಸದಿರುವ ಕಾರಣ ಮನೆಯಲ್ಲೇ ಕಸ ಸಂಗ್ರಹವಾಗುವ ಪರಿಣಾಮವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದ್ದು, ಕೆಲವರು ಕಸದ ಚೀಲಗಳನ್ನು ರಸ್ತೆಯಲ್ಲಿ ಬಿಸಾಕುತ್ತಿದ್ದಾರೆ. ಇದು ಪರಿಸರ ಮಾಲಿನ್ಯ ಮತ್ತು ಸೊಳ್ಳೆಗಳ ಸಮಸ್ಯೆ ತರುವ ಸಾಧ್ಯತೆ ಹೆಚ್ಚಾಗಿದೆ.
ಹಸಿ ಕಸ, ಒಣ ಕಸ ಬೇರೆ ಬೇರೆ ಕೊಡುವ ನಿಯಮವನ್ನು ಅನುಸರಿಸಲು ಸಾರ್ವಜನಿಕರಿಗೆ ಸಮ್ಮತಿ ಇದ್ದು. ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಪ್ರತಿದಿನವೂ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವಂತೆ ಸಾರ್ವಜನಿಕರು ಕೋರಿದ್ದಾರೆ. ವಾರಕ್ಕೆ ಕೇವಲ ಎರಡು ಬಾರಿ ಮಾತ್ರ ಕಸ ತೆಗೆದುಕೊಂಡರೆ, ಮನೆಗಳಲ್ಲಿ ಕಸ ಸಂಗ್ರಹವಾಗುತ್ತದೆ. ಇದರಿಂದ ನಾಗರಿಕರು ರಸ್ತೆಯಲ್ಲಿ ಕಸ ಎಸೆಯುವ ಅನಿವಾರ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ಕಸ ಸಂಗ್ರಹಿಸುವ ವಾಹನ ಪ್ರತಿನಿತ್ಯ ಕಸ ಸಂಗ್ರಹಿಸಲು ಅನುವು ಮಾಡಿ ಕೊಡುವಂತೆ ನಗರಸಭೆಯ ಆಡಳಿತವನ್ನು ಮನವಿ ಮಾಡಿದ್ದಾರೆ.