ಮಡಿಕೇರಿ, ಅ. 02: ರಾಜ್ಯದ ಎರಡನೇ ಅತಿ ದೊಡ್ಡ ನಾಡ ಹಬ್ಬ, ಮಡಿಕೇರಿ ದಸರಾಕ್ಕೆ 1.50 ಕೋಟಿ, ಗೋಣಿಕೊಪ್ಪ ದಸರಾಕ್ಕೆ 75 ಲಕ್ಷ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ.
ಕೊಡಗು ಜಿಲ್ಲಾಧಿಕಾರಿ ಖಾತೆಗೆ ಶೀಘ್ರದಲ್ಲೇ ಅನುದಾನದ ಹಣ ವರ್ಗಾವಣೆ ಆಗಲಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ದಸರಾ ಉತ್ಸವಕ್ಕೆ, ಸರ್ಕಾರ ಅತ್ಯಧಿಕ ಅನುದಾನ ಬಿಡುಗಡೆ ಮಾಡಿದೆ. ಶಾಸಕರಾದ ಎ. ಎಸ್. ಪೊನ್ನಣ್ಣ ಮತ್ತು ಡಾ. ಮಂತರ್ ಗೌಡ ಅವರ ಪ್ರಯತ್ನದ ಫಲವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ ಸರಕಾರ.
ಸುಸಜ್ಜಿತ ಮತ್ತು ವ್ಯವಸ್ಥಿತ ಸಂಪ್ರದಾಯ ಬದ್ದ ದಸರಾ ಆಚರಣೆಗೆ ಒತ್ತು ನೀಡಲು ಶಾಸಕದ್ವಯರ ಇಂಗಿತ ವ್ಯಕ್ತಪಡಿಸಿದ್ದಾರೆ.