ಮಡಿಕೇರಿ, ನ.05: ಕರ್ನಾಟಕ ರಾಜ್ಯ, ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ ನವೆಂಬರ್ 3ರಂದು ನಡೆಯಿತು.
ಕವಿಗಳಾದ ಮೂಕಳೆರ ಟೈನಿಪೂಣಚ್ಚ ಅವರ ಅಧ್ಯಕಷತೆಯಲ್ಲಿ ನಡೆದ, ಕಾರ್ಯಕ್ರಮದ ಉದ್ಘಾಟನೆಯನ್ನು, ಶ್ರೀ ವೆಂಕಟೇಶ್ ಪ್ರಸನ್ನ ಪಿ.ಕೆ. ಪ್ರಾoಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ವಹಿಸಿದ್ದರು. ಶ್ರೀಮತಿ ಕಾನಡ್ಕ ಡೀನದೇವಯ್ಯ, ಅರ್ಥಶಾಸ್ತ್ರ ಉಪನ್ಯಾಸಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ಪ್ರಾಸ್ತವಿಕ ನುಡಿಗಳನ್ನಾಡಿದರು.
ಕುಮಾರಿ ಯಶಿಕದೇವಯ್ಯ ಕಾನಡ್ಕ ಇವರು ಪ್ರಾರ್ಥನಾ ನೃತ್ಯ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ. ಎ ವಿದ್ಯಾರ್ಥಿನಿಯಾರಾದ ವೃಂದ ನಿರೂಪಿಸಿ, ಶ್ವೇತಾ ಅತಿಥಿಗಳನ್ನು ಸ್ವಾಗತಿಸಿದರು.
ಕವಿಗೋಷ್ಠಿಯಲ್ಲಿ 26 ಕವಿಗಳು ಭಾಗವಹಿಸಿದ್ದು, ಕನ್ನಡ ನಾಡು-ನುಡಿ ಸಂಸ್ಕೃತಿ ಯ ಬಗ್ಗೆ,ಕವನಗಳನ್ನು ವಾಚಿಸಿ, ಸಭಿಕರನನು ರಂಜಿಸಿ, ಕನ್ನಡದ ಕಂಪನ್ನ ಪಸರಿಸಿದರು. ಭಾಗವಹಿಸಿದ ಕವಿಗಳಿಗೆ ಗೌರವಪೂರ್ವಕವಾಗಿ ಕನ್ನಡ ರಾಜ್ಯೋತ್ಸವದ ಶಾಲನ್ನು ಹಾಕಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಹಾಗೂ ಪುಸ್ತಕವನ್ನು ಕೊಟ್ಟು ಗೌರವಿಸಲಾಯಿತು.