ವಿರಾಜಪೇಟೆ, ನ.23: ತಾಯಿ ಭಾರತೀಯ ಹೆಮ್ಮೆಯ ಪುತ್ರರಾದ, ಫಿ.ಮಾ.ಕಾರ್ಯ ಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನ ಅತ್ಯಂತ ತುಚ್ಚವಾಗಿ ಹಂಗಿಸಿರುವ, ಹೊರಜಿಲ್ಲೆ ಮೂಲದ, ಮಡಿಕೇರಿ ವಕೀಲ, ವಿದ್ಯಾಧರನ, ವಕೀಲಗಿರಿ ವಜಾಗೊಳಿಸುವುದರ ಜೊತೆಗೆ, ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಾಗೂ ಈತನ ಹಲವು ವರ್ಚಗಳಿಂದ ಜನಾಂಗ ಜನಾಂಗಗಳ ನಡುವೆ, ಧರ್ಮಗಳ ನಡುವೆ ಒಡಕು ಮೂಡಿಸಿ, ಅಶಾಂತಿ ಸೃಷ್ಟಿಸಲು ಯತ್ನಿಸುತಿದ್ದು, ಹಲವು ಸಮಾಜ ವಿದ್ವಾಂಶಕರ ಜೊತೆಗಿನ ನಂಟು ಇರುವ ಬಗೆಯೂ ಸಂಶಯಗಳಿವೆ ಈ ಎಲ್ಲಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ, ಬೃಹತ್ ಜನಾಂದೊಲನ ನಡೆಸಲು ಸಿದ್ದತೆಗಳು ನಡೆಯುತಿದ್ದು, ಕೆಲವೇ ದಿನಗಳಲ್ಲಿ, ಜಿಲ್ಲೆಯ ಎಲ್ಲಾ ಧರ್ಮ, ಜನಾಂಗ, ಸಮಾಜ, ಸಂಘಟನೆಗಳು, ಎಲ್ಲಾ ರಾಜಕೀಯ ಪಕ್ಷಗಳ, ಹಾಲಿ ಮಾಜೀ ಸೇನಾಧಿಕಾರಿಗಳ, ಮುಖಂಡರ ಸಭೆ ಕರೆದು, ಸಾಮೂಹಿಕ ಕೊಡಗು ಬಂದ್ ಮತ್ತು ರಸ್ತೆತೆಡೆ ಪ್ರತಿಭಟನೆಯೊಂದಿಗೆ, ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಲು ಉದ್ದೇಶಿಸಲಾಗಿದೆ ಎಂದು, ದೇಶ ಪ್ರೇಮಿ, ಫಿ.ಮಾ. ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಅಭಿಮಾನಿಗಳ ಮೂಲದಿಂದ ತಿಳಿದು ಬಂದಿದೆ.