Site icon nadubadenews.com

ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?
Spread the love
ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?
ಪಿ.ಸಿ.ಐ. ನಿಂದ ಸ್ಕ್ಯಾಡ್‌ ಸರ್ಟಿಫಿಖೇಟ್‌ ಪಡೆದಿರುವ ನಡುಬಾಡೆ ನ್ಯೂಸ್‌ಗೆ ಸುದ್ದಿ ಮತ್ತು ಜಾಹಿರಾತು ನೀಡಲು, 8951073556 ಗೆ ವಾಟ್ಸಾಪ್‌ ಮಾಡಿ

ನಡುಬಾಡೆ ನ್ಯೂಸ್‌, ವಿರಾಜಪೇಟೆ, ಸೆ.30: ಭಾರತದ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಬಂದಿದ್ದು ಕರ್ನಾಟಕದ ಕೆಲವು ಮಾರುಕಟ್ಟೆಗಳಿಗೂ ಬಂದಿದೆ ಎನ್ನುವ ಆತಂಕಕಾರೀ ವಿಚಾರ ಬೆಳಕಿಗೆ ಬಂದಿದೆ.

ಈಗಾಗಲೇ ಶಿವಮೊಗ್ಗದ ಹಲವು ಕಡೆ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಅಂಶವಿದೆ ಎಂಬ ಕಾರಣಕ್ಕೆ ಚೀನಾ ಬೆಳ್ಳುಳ್ಳಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಬೆಳ್ಳುಳ್ಳಿಗೆ ಬೆಲೆ ಹೆಚ್ಚಳವಾಗಿರುವುದರಿಂದ ಕಳ್ಳ ಮಾರ್ಗದ ಮೂಲಕ ಚೀನಾ ಬೆಳ್ಳುಳ್ಳಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಕರ್ನಾಟಕಕ್ಕೂ ಕಾಲಿಟ್ಟಿದೆ ಎನ್ನುವುದು   ಆತಂಕಕಾರೀ ವಿಚಾರವಾಗಿದೆ.

ಶಿವಮೊಗ್ಗದ ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ ಮಾರ್ಕೆಟ್, ಎಪಿಎಂಸಿ ಮಾರುಕಟ್ಟೆ ಸೇರಿದಂತೆ. 8 ಕಡೆ ದಾಳಿ ಮಾಡಿರುವ ಆಹಾರ ಸುರಕ್ಷತಾ ಅಧಿಕಾರಿಗಳು, 50 ಕೆ.ಜಿ.ಗೂ ಅಧಿಕ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಬೆಳ್ಳುಳ್ಳಿ ಗುರುತಿಸುವುದು ಹೇಗೆ ಮತ್ತು ಅಡ್ಡಪರಿಣಾಮಗಳೇನು? ಚೀನಾ ಮಾರುಕಟ್ಟೆ ಆರೋಗ್ಯಕ್ಕೆ ಮಾರಕವಾಗಿದೆ. ನಿಷೇಧಿತ ರಾಸಾಯನಿಕಗಳನ್ನು ಬಳಸಿ ಇದನ್ನು ಬೆಳೆಯಲಾಗುತ್ತದೆ. ಚೀನಾ ಬೆಳ್ಳುಳ್ಳಿ ನೋಡಲು ದಪ್ಪವಾಗಿರುತ್ತದೆ ಮತ್ತು ಕೊಂಚ ಪಿಂಕ್ ಬಣ್ಣದಲ್ಲಿರುತ್ತದೆ. ಅತಿಯಾಗಿ ರಾಸಾಯನಿಕ ಬಳಸುವುದರಿಂದ ಬೇಗನೇ ಕೆಡುವುದಿಲ್ಲ. ಆದರೆ ಇದನ್ನು ಸೇವನೆ ಮಾಡುವುದರಿಂದ ತೂಕ ಹೆಚ್ಚಳವಾಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಈ ಬೆಳ್ಳುಳ್ಳಿ ಸೇವನೆಯಿಂದ ಮೂತ್ರಕೋಶ,‌ ಮತ್ತು ಲಿವರ್ ಹಾನಿಯಾಗಬಹುದು.

Exit mobile version