https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

Uncategorized
10/01/202510/01/2025nadubadenews@gmail.comLeave a Comment on ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್
Spread the love
ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

           

ಪ್ರಶಾಂತ್‌ ಗಣೇಶ್‌

ಸೋಮವಾರಪೇಟೆ ಸಮೀಪದ, ಇತಿಹಾಸ ಪ್ರಸಿದ್ದ, ಬೇಳೂರು ಬಾಣೆ ಗಾಲ್ಫ್‌ ಕ್ರೀಡಾಂಗಣಕ್ಕೆ ಸಾರ್ವಜನಿಕ ಪ್ರವೇಶ ನಿಶೇಧ ಮಾಡುವ ಕ್ರಮ ಸರಿಯಾದದಲ್ಲ. ಇದು ಸೋಮವಾರಪೇಟೆ ಪಟ್ಟಣ, ಸುತ್ತಲ ಗ್ರಾಮಗಳ ಮತ್ತು ಪ್ರವಾಸಿಗರ ವಾಯುವಿಹಾರಕ್ಕೆ ನಿತ್ಯದ ನೆಚ್ಚಿನ ತಾಣವಾಗಿದ್ದು, ಈದೀಗ ಬೇಳೂರು ಕ್ಲಬ್‌ ಇಡೀ ಬಾಣೆಗೆ ಬೇಲಿ ಹಾಕಿ ಸಾರ್ವಜನಿಕ ಪ್ರವೇಶ  ನಿಷೇಧ ಮಾಡುವ ಅಧಿಸೂಚನೆ ಹೊರಡಿಸಿದ್ದು, ಮೀರಿದವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬೆಧರಿಕೆಯನ್ನೂ ಹಾಕಿದ್ದಾರೆ. ಇದು ಸ್ಥಳೀಯರ ನೆಮ್ಮದಿ ಮತ್ತು ಪ್ರವಾಸಿಗರ ಸಂತೋಷವನ್ನು ಕಿತ್ತುಕೊಳ್ಳುವ ಪ್ರಯತ್ನ ಆಗಲಿದೆ.

ಬೇಳೂರು ಬಾಣೆಯ ಮಧ್ಯೆ ಭಾಗದಲ್ಲಿ 7.5 ಎಕರೆ ಪೈಸಾರಿ ಜಾಗವನ್ನು DC ಚಾರುಲತಾ ಅವರು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಅಲ್ಲಿಂದ ಪ್ರವಾಸೋದ್ಯಮ ಇಲಾಖೆ ಹೇಗೆ ಅದನ್ನು ಗಾಲ್ಫ್ ಅಸೋಸಿಯೇಷನ್‌ಗೆ ಲೀಸ್ ಕೊಟ್ಟಿದ್ದಾರೆ..? ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವುದು ಬಿಟ್ಟು ಈ ರೀತಿ ಮಾಡುವುದು ಸರಿಯೇ…? ಎಲ್ಲಿಂದಲೋ ಬರೋ ಶ್ರೀಮಂತ ಮಂದಿ ಗಾಲ್ಫ್ ಆಡುವುದನ್ನು ನಮ್ಮೂರ ಮಂದಿ ಬೇಲಿ ಬದಿ ನಿಂತು ನೋಡಬೇಕಾ…?

ಕೆಂಚಮ್ಮನ ಬಾಣೆ, ಕುಸುಬೂರು ಗ್ರಾಮದ ಸಾವಿರಾರು ಜನರು ಓಡಾಡುವ ಜಾಗ. ಬೇಲಿ ಹಾಕಿದರೆ ಅವರು ಸುತ್ತಿ ಬಳಸಿ ಹೋಗಬೇಕಲ್ಲವೇ…? ಒಂದು ಆಟೋ ಕೂಡ ಸಿಗುವುದಿಲ್ಲ ಅಲ್ಲಿ….. ಗ್ರಾಮಸ್ಥರು ದನ ಮೇಯಿಸಲು ಬಳಸುತ್ತಿದ್ದ ಜಾಗ ಅದು…. ಗ್ರಾಮಸ್ಥರು ಸಂಜೆ ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಮುಗಿಸಿ ಹರಟೆ ಪಟ್ಟಾಂಗ ಹೊಡೆದು ಹೊತ್ತು ಕಳೆಯಲು ಬಳಸುತ್ತಿದ್ದ ಜಾಗ….. ಸೋಮವಾರಪೇಟೆಯ ಮಂದಿ ನೆಂಟರಿಷ್ಠರು ಬಂದಾಗ ಹೊತ್ತು ಕಳೆಯಲು ಬರುತ್ತಿರುವ ಜಾಗ…. ಪ್ರವಾಸಿಗರು ಎಲ್ಲರೂ ಅಲ್ಲಿ ಒಂದು stop ಕೊಟ್ಟೆ ಕೊಡುತ್ತಾರೆ…. ಸೋಮವಾರಪೇಟೆ ಯ ಛಾಯಾಗ್ರಾಹಕರಿಗೆ ಪ್ರಿ -ವೆಡ್ಡಿಂಗ್ ಶೂಟ್ ಗಳಿಗೆಲ್ಲಾ ಅದೊಂದು ಪ್ರಶಸ್ತ ತಾಣವಾಗಿತ್ತು. ಒಂದೆರಡು ಅಂಗಡಿ ಮಳಿಗೆಗಳು ಬದುಕು ಕಟ್ಟಿಕೊಂಡಿವೆ ಅಲ್ಲಿ….

ಹೀಗಿರುವಾಗ ಏಕಾಏಕಿ ಬೇಲಿ ಹಾಕುವುದೆಂದರೆ ಏನರ್ಥ?

ಪ್ರವಾಸೋದ್ಯಮ ಇಲಾಖೆ ಕೂಡಲೇ 7.5 ಎಕರೆಯನ್ನು ಮರಳಿ ಪಡೆದು ಅದನ್ನು ಪ್ರವಾಸೋದ್ಯಮ ತಾಣವನ್ನಗಿಸಲಿ….  ಸೋಮವಾರಪೇಟೆ ಬೆಳವಣಿಗೆಗೆ ಸಹಕಾರಿಯಾಗಲಿ. ಕೆಲವು “ರಾಜಕಾರಣಿಗಳು “, ಸಿನಿಮಾ ನಟರು, ದೊಡ್ಡ ಪ್ಲಾಂಟರ್ ಗಳು, ಇಲ್ಲಿನ ಕ್ಲಬ್ ಸದಸ್ಯರು.

ಬ್ರಿಟಿಷ್ ಅಧಿಕಾರಿ J. H. Spraut ಎಂಬಾತ ಬೇಳೂರು ಕ್ಲಬ್‌ಗೆ ಈ ಜಾಗವನ್ನು ಬರೆದಿದ್ದು. ಬ್ರಿಟಿಷರು ಬಿಟ್ಟು ಹೋಗುವಾಗ ಈ ಎಲ್ಲಾ ಜಾಗ ಕ್ಲಬ್ ವಶಕ್ಕೆ ಬಂದಿದೆ.  ಮಠಕ್ಕೆ ಸೇರಿದ ಜಾಗವೂ ಅಲ್ಲಿದೆ. ಹಾಗಿರುವಾಗ ಹೇಗೆ ಬೇಲಿ ಹಾಕಲು ಸಾಧ್ಯ?

ಭದ್ರತೆಗಾಗಿ ಹಾಕಿದ್ದರೆ ಪರವಾಗಿಲ್ಲ. CC ಕ್ಯಾಮೆರಾ ಕೂಡ ಹಾಕಿಕೊಳ್ಳಲಿ. ಆದರೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಸರಿಯಲ್ಲ. ಕ್ಲಬ್ ನವರೇ ಸ್ಥಳೀಯ ಜನರನ್ನು ಬಿಟ್ಟು ಪ್ರವಾಸಿಗರಿಗೆ ಬೇಕಿದ್ದರೆ ಶುಲ್ಕ ವಿಧಿಸಲಿ……

ಬೇಳೂರು ಬಾಣೆ ಪ್ರವಾಸಿ ಸ್ಥಳವಾಗಿ ಉಳಿಯಲಿ ಅಷ್ಟೇ……

Post navigation

ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.
ಕೆದಮುಳ್ಳೂರು ದವಸಭಂಡಾರ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವಿರೋಧ ಆಯ್ಕೆ

Related Posts

ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

07/12/202408/12/2024nadubadenews@gmail.com
ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

28/10/202428/10/2024nadubadenews@gmail.com
ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಕೃಷಿ ಭಾಗ್ಯ ಯೋಜನೆಯಡಿ, ಕ್ಷೇತ್ರ ಬದು, ಕೃಷಿ ಹೊಂಡ, ತಂತಿ ಬೇಲಿ, ಪಾಲಿಥೀನ್‌ ಹೊದಿಕೆ, ಪಂಪ್‌ ಸೆಟ್‌, ತುಂತುರು ನೀರಾವರಿ ಯೋಜನೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version