ನಡುಬಾಡೆ: ಅರಕಲಗೋಡ್, ಸೆ. 26: ಸರ್ಕಾರ ಸರ್ಕಾರಿ ಶಾಲ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಎಂಬ ಗ್ರಾಮದ, ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು. ತಾಲೂಕಿನ ಕೋಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಲ್ಲಿ ಬಿದ್ದು ಕಲುಸಿತಗೊಂಡ ಆಹಾರವನ್ನು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಾಂತಿಯಿಂದ ಬಳಲುತ್ತಿದ್ದವರನ್ನು ಶಿಕ್ಷಕರು ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಸುರಕ್ಷತಾ ಕ್ರಮ ವಹಿಸದ ಶಾಲಾ ಶಿಕ್ಷಕರ ವಿರುದ್ಧ ಇದೀಗ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಕುರಿತಂತೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ರಾಜ್ಯದ ಇತರ ಶಾಲೆಗಳಿಗೂ ಎಚ್ಚರಿಕೆಯಾಗ ಬೇಕಾಗಿದೆ. ಮೇಲಾಧಿಕಾರಿಗಳು ಆವಗಾವಗ ಶಾಲೆಗಳಿಗೆ ಬೇಟಿ ನೀಡಿ, ಶುಚಿತ್ವ, ಆಹಾರ ಸಾಮಾಗ್ರಿಗಳ ದಾಸ್ತಾನು ಗುಣಮಟ್ಟವನ್ನು ಪರಿಶೀಲಿಸದೇ ಇಂತ ಅಚಾತೂರ್ಯಕ್ಕೆ ಕಾರಣರಾಗುತಿದ್ದಾರೆ. ಅಧಿಕಾರಿಗಳು ತಮ್ಮ ಆಲಸ್ಯ ಮತ್ತು ನಿರ್ಲಕ್ಷದಿಂದ ಮುಗ್ದ ಮಕ್ಕಳ ಭವಿಷ್ಯಕ್ಕೆ ಕತ್ತಲಾಗದೆ, ಸೂಕ್ತ ಮುಂಜಾಗೃತಾ ಕ್ರಮ ವಹಿಸಿ ಮಕ್ಕಳ ಬಾಳಿನ ಬೆಳಕಾಗಬೇಕೆಂದು ಸಾರ್ವಜನಿಕ ಒತ್ತಾಯವಾಗಿದೆ.