ಬೆಂಗಳೂರು, ಜೂ.18: (nadubadenews): ಕೊಡಗು ಬಿಜೆಪಿಯ ಅಧ್ಯಕ್ಷರಾಗಿ ಮರುನೇಮಕವಾಗಿರುವ ನಾಪಂಡ ರವಿ ಕಾಳಪ್ಪ ಅವರು ರಾಜ್ಯಾಧ್ಯಕರಾದ ಶ್ರೀ ಬಿ ವೈ ವಿಜಯೇಂದ್ರ ಅವರಿಂದ ಆದೇಶ ಪ್ರತಿ ಸ್ವೀಕರಿಸಿದರು.
ಇಂದು ಬಾಜಾಪ ರಾಜ್ಯ ಕಾರ್ಯಾಲಯ ಜಗನ್ನಾತಭವನದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಅಭಿನಂದನೆ ಮತ್ತು ವಿಶೇಷ ಸಭೆಯಲ್ಲಿ ರಾಜ್ಯ ಚುನಾವಣಾ ಅಧಿಕಾರಿ ಕ್ಯಾ. ಗಣೇಶ ಕಾರ್ಣಿಕ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ ರಾಜೀವ, ಶ್ರೀ ನಂದೀಶ್ ರೆಡ್ಡಿ, ಶ್ರೀ ಪ್ರೀತಮ್ ಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ ಟಿ ರವಿ ಹಾಗೂ ರಾಜ್ಯದ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ರವಿಕಾಳಪ್ಪ ಅವರು ಜಿಲ್ಲಾಧ್ಯಕಷರಾಗಿ ಪುನರ್ ಜವಾಬ್ದಾರಿ ವಹಿಸಿಕೊಂಡರು.