https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಬಸವಣ್ಣನವರ ತತ್ವ,ಆದರ್ಶಗಳನ್ನು ಪಾಲಿಸೋಣ, ಶಾಸಕ ಡಾ. ಮಂತರ್‌ ಗೌಡ ಕರೆ…

News, Informatin , Enteetinement and Advertisement
30/04/202530/04/2025nadubadenews@gmail.comLeave a Comment on ಬಸವಣ್ಣನವರ ತತ್ವ,ಆದರ್ಶಗಳನ್ನು ಪಾಲಿಸೋಣ, ಶಾಸಕ ಡಾ. ಮಂತರ್‌ ಗೌಡ ಕರೆ…
Spread the love

 ಸೋಮವಾರಪೇಟೆ, ಏ.30: ಇಲ್ಲಿನ ಬಸವ ಬಳಗ, ತಾಲ್ಲೋಕು ಆಡಳಿತ,ಹಿರಿಯ ನಾಗರಿಕರ ಟ್ರಸ್ಟ್, ಸಾಹಿತ್ಯ ಪರಿಷತ್ತು,ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬಸವೇಶ್ವರ ವೃತ್ತದಲ್ಲಿ  ಆಯೋಜಿಸಲಾಗಿದ್ದ ಬಸವೇಶ್ವರರ 892 ನೆ ಜಯಂತಿ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

   12ನೆ ಶತಮಾನದಲ್ಲಿಯೇ ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟಿದ್ದರು. ಇಂದು ನಾವು ಅವರ ಜಯಂತಿ ಆಚರಿಸುವುದು ಮಾತ್ರವಲ್ಲ ಅವರ ತತ್ವ,ಆದರ್ಶಗಳನ್ನು ಪಾಲಿಸಬೇಕು,ಜಾತ್ಯಾತೀತ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದರು. ವಿಶ್ವದಲ್ಲಿ ಮೊದಲ ಭಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಎಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಇರುವ ಏಕೈಕ ಬಸವೇಶ್ವರರ ಪ್ರತಿಮೆ ಇದ್ದಾಗಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.

   ಬಸವೇಶ್ವರರ ಪ್ರತಿಮೆ ಇರುವ ವೃತ್ತಕ್ಕೆ ಅಧಿಕೃತವಾಗಿ ಬಸವೇಶ್ವರ ವೃತ್ತವೆಂದು ನಾಮಕರಣ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಸೋಮವಾರಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆದಮ್ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮಂತರ್ ಗೌಡ ಸಂಬಂಧಿಸಿದ ಪಂಚಾಯ್ತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಜಾರಿಗೊಳಿಸುವಂತೆ ತಿಳಿಸಿದರು.

    ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ ಮಾತನಾಡಿ 12 ನೆ ಶತಮಾನದಲ್ಲಿ ಬಸವಣ್ಣ ನವರು ಲಿಂಗ ತಾರತಮ್ಯ,ಅಸ್ಪೃಶ್ಯತೆ ವಿರುದ್ಧ ಸಿಡಿದಿದ್ದೇವರು ಆ ಮೂಲಕ ಸಮಾನತೆ ತರಲು ಪ್ರಯತ್ನಿಸಿದರು. ಆಡು ಭಾಷೆಯಲ್ಲಿ ವಚನಗಳನ್ನು ರಚಿಸಿ ಜನಸಾಮಾನ್ಯರಿಗೆ ಪರಿಸ್ಥಿತಿಯನ್ನು ಅರ್ಥೈಸಿದರು,ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡಿದರು ಎಂದರು. ಇಂದು ನಾವು ಅವರ ದಾರಿಯಲ್ಲಿ ಸಾಗಬೇಕಾಗಿದೆ ಆಗ ಸಮಾಜ ಸುಧಾರಣೆಯಾಗುತ್ತದೆ ಎಂದರು.

     ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ ಚಿತ್ರದುರ್ಗ ಬೃಹನ್ಮಠದ ಸಹಕಾರದೊಂದಿಗೆ ಸೋಮವಾರಪೇಟೆ ಪತ್ರಕರ್ತರ ಸಂಘದ ಮೂಲಕ ನಿರ್ಮಾಣಗೊಂಡ  ಬಸವೇಶ್ವರರ ಪ್ರತಿಮೆ ನಿರ್ಮಾಣಗೊಂದು 25 ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಶಾಸಕ ಮಂತರ್ ಗೌಡ ರವರ ಆಸಕ್ತಿಯಿಂದ ರಸ್ತೆ ಅಗಲೀಕರಣ ಮತ್ತು ಪ್ರತಿಮೆ ಸುತ್ತಾ ಅಲಂಕರಣಿಕರಣ ಮಾಡಿರುವುದು ಗಮನಾರ್ಹ ಹಾಗು ಕೃತಜ್ಞತಾ ಕಾರ್ಯವೆಂದು  ಶ್ಲಾಘಿಸಿದರು. ಕಳೆದ 24ವರ್ಷಗಳಿಂದ ಪ್ರತಿಮೆಯ ಮುಂದೆಯೇ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಾತ್ಯಾತೀತವಾಗಿ ನಡೆಸಿಕೊಂಡು ಬರುತ್ತಿದ್ದ ಸಹಕರಿಸುತ್ತಿರುವ ಸರ್ವ ಸಂಘಟನೆಗಳನ್ನು ಕೃತಜ್ಞತಾ ಭಾವದಿಂದ ಸ್ಮರಿಸಿಕೊಂಡರು.

     892 ನೆ ಬಸವ ಜಯಂತಿ ಅಂಗವಾಗಿ ನಿವೃತ್ತ ಮುಖ್ಯ ಶಿಕ್ಷಕ ಹಾಲೆಬೆಲೂರು ನಿರ್ವಾಣಿ ಶೆಟ್ಟಿ,ಜನರಲ್ ಕಾರ್ಯಪ್ಪ ಪ್ರಶಸ್ತಿ ಪುರಸ್ಕೃತ ಪೊಲೀಸ್ ಪೇದೆ ಸುದೀಷ್,ಪಟ್ಟಣ ಪಂಚಾಯ್ತಿ ಪೌರಸೇವಾ ನೌಕರೆ ಹೊನಲಾದೇವಿ,ಕಂದಾಯ ಇಲಾಖೆ ನಿವೃತ್ತ ಡಿ ಗ್ರೂಪ್ ನೌಕರ ಕೃಷ್ಣ ಅವರುಗಳನ್ನು ಸನ್ಮಾನಿಸಲಾಯಿತು.

   ಕಾರ್ಯಕ್ರಮದಲ್ಲಿ ಕುಶಾಲನಗರದ ಶಶಿಕುಮಾರ್ ಹಾಗೂ ಮಂಜು ಭಾರ್ಗವಿ ದಂಪತಿಗಳ ಪುತ್ರಿ  ಪುಟಾಣಿ ಷಷ್ಠಿಷಾಡ್ಗುಣ್ಯ ವಚನ ಕಂಠಪಾಠ ಪ್ರಸ್ತುತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕೊಡ್ಲಿಪೇಟೆ ಕಲ್ಲು ಮಠದ ಶ್ರೀ.ಮಹಾಂತ ಸ್ವಾಮೀಜಿ, ಶನಿವಾರಸಂತೆ ಸಮೀಪದ ಮಾದ್ರೆ ಗ್ರಾಮದ  ಮುದ್ದಿನ ಕಟ್ಟೆ ಮಠದ ಶ್ರೀ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ,ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ , ಸದಸ್ಯರಾದ ಶೀಲಾ ಡಿಸೋಜಾ,ಸಂಜೀವ, ತಹಸಿಲ್ದಾರ್ ಕೃಷ್ಣ ಮೂರ್ತಿ, ಪ.ಪಂ ಮುಖ್ಯಾಧಿಕಾರಿ ಸತೀಶ ಹಿರಿಯ ನಾಗರಿಕರ ಟ್ರಸ್ಟ್ ನ ಅಧ್ಯಕ್ಷ ಕೆ. ಜಿ.ಸುರೇಶ್,ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜೇತ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಪ್ಪ, ಕೆ.ಟಿ.ಡಿ.ಒ ದ ತಾಲ್ಲೋಕು ಅಧ್ಯಕ್ಷ ವಸಂತ,ಮೋಟಾರು ವಾಹನ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಸೂಡ ಸದಸ್ಯ ಬಸವರಾಜ್,ಜನಪದ ಪರಿಷತ್ತು ಅಧ್ಯಕ್ಷ  ಪ್ರಕಾಶ್, ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಪ್ರವೀಣ್,ತಾಲ್ಲೋಕು ಅಧ್ಯಕ್ಷ ಆದರ್ಶ,ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಗಿರೀಶ್,ಅಕ್ಕನ ಬಳಗದ ಕಾರ್ಯದರ್ಶಿ ಮಾಯಾಗಿರೀಶ್ ವಿವಿಧ ಇಲಾಖೆಯ ಅಧಿಕಾರಿಗಳು,ಸಂಘಟನೆಗಳ ಸದಸ್ಯರುಗಳು,ಪಟ್ಟಣದ ಪ್ರಮುಖರು ಹಾಜರಿದ್ದರು.

Post navigation

ಮೌಲಾನಾ ಆಜಾದ್ ಮಾದರಿ ಶಾಲೆ, 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ…
ಬಾಳೆಕುಟ್ಟಿರ ಕೇರ್‌ ಬಲಿ ನಮ್ಮೆ ನಾಳೆಂಜ…

Related Posts

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

22/07/202522/07/2025nadubadenews@gmail.com
ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ

ಅಲ್ಪ ಸಂಖ್ಯಾತರ ಅಭಿವೃದ್ದಿ, ಎ.ಎಸ್.‌ ಪೊನ್ನಣ್ಣ ಮನವಿಗೆ, ಸಚಿವ ಜಮೀರ್‌ ಸ್ಪಂದನೆ

18/06/202518/06/2025nadubadenews@gmail.com
ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!

ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!

30/06/202530/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version