Site icon nadubadenews.com

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ
Spread the love
ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಸೋಮವಾರಪೇಟೆ,  ಮಾ. 07: ಇಂದು ರಾಜ್ಯ ಸರ್ಕಾರದ ಬಡ್ಜೆಟ್‌ ಮಂಡನೆ ಎನ್ನುವ ಬದಲು, ಕಾಂಗ್ರೆಸ್‌ನ ಓಲೈಕೆ ಚೀಟಿ ಎನ್ನುವುದು ಸೂಕ್ತ ಎಂದು ಬಾಜಾಪ ಯುವ ಮೋರ್ಚಾ ಕೊಡಗು ಜಿಲ್ಲಾಧ್ಯಕ್ಷ ಮಹೇಶ್‌ತಿಮ್ಮಯ್ಯ ಅವರು ವ್ಯಂಗ್ಯ ಮಾಡಿದ್ದಾರೆ.

           ಕಾಂಗ್ರೆಸ್‌ ಸರ್ಕಾರ ಎಂದರೆ  ಒಂದು ವರ್ಗದ ಪರ ಎನ್ನುವುದು ಲೋಕಕ್ಕೇ ಗೊತ್ತಿರುವ ಸತ್ಯ. ಆದರೆ ಇಷ್ಟೊಂದು ತುಷ್ಟೀಕರಣ, ರಾಜ್ಯದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕಳೆದ ಬಡ್ಜೆಟ್‌ನಲ್ಲಿ ಘೋಷಿಸಿದ ಅಭಿವೃದ್ದಿ ಕಾರ್ಯಗಳಿಗೇ ಸರ್ಕಾರದಲ್ಲಿ ಅನುದಾನ ಇಲ್ಲದಿರುವಾಗ, ಹೊಸ ಯೋಜನೆಗಳಿರಲಿ, ಕನಿಷ್ಟ ಮೂಲಭೂತ ಸೌಕರ್ಯಗಳ ಅನುಷ್ಟಾನಕ್ಕೂ ಹೆಣಗಾಡುತ್ತಿರುವ ಈ ಸರ್ಕಾರದ ಬೋಗಸ್‌ ಚೀಟಿಯನ್ನು ನಂಬುವಷ್ಟು ರಾಜ್ಯದ ಜನ ಮುಟ್ಟಾಳರಲ್ಲ ಎಂದಿರುವ ಮಹೇಶ್‌ ತಿಮ್ಮಯ್ಯ,   ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ನಮ್ಮ ದುರಂತ ಇನ್ನೂ ಅಭಿವೃದ್ದಿಯನ್ನು ಹೇಗೆ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದು, ಕೊಡಗಿನಲ್ಲಿ ಹೊಸ ಯೋಜನೆಗಳು ಗಗನ ಕುಸುಮ, ಆದರೆ ಹಿಂದಿನ ಶಾಸಕರು ತಂದಿರುವ ಯೋಜನೆಗಳನ್ನು ಉಳಿಸಿಕೊಟ್ಟರೆ ಕೊಡಗಿನ ಜನತೆ ಋಣಿಯಾಗಿರುತೇವೆ ಎಂದು ಛೇಡಿಸಿದ್ದಾರೆ.

Exit mobile version