
ವಿರಾಜಪೇಟೆ,ಜು.11;(nadubadenews): ವಿರಾಜಪೇಟೆ, ಪುರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳಲ್ಲ, ನಿಷೇದಿತ, ಪರಿಸರ ಹಾನಿಕಾರಕ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಆಗುತ್ತಿರುವ ಹಿನ್ನೆಲೆ, ಗುರುವಾರ ಮಧ್ಯಾಹ್ನ ಪುರಸಭೆಯ ಪರಿಸರ ಅಭಿಯಂತರರಾದ ಶ್ರೀಮತಿ ರೀತು ಸಿಂಗ್ ಹಾಗೂ ಸಿಬ್ಬಂದಿಗಳು, ಮಾಂಸ ಮಾರುಕಟ್ಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ ಅಂಗಡಿ ಮಳಿಗೆಗಳಲ್ಲಿ ಪರಿಶೀಲಿಸಿ 20 ಕೆಜಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ವಶಪಡಿಸಿಕೊಂಡು, ದಂಡ ವಿಧಿಸಿದ್ದಾರೆ. ಮುಂದೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ ಮಳಿಗೆಗಳನ್ನು ನಿರಂತರ ಪರಿಶೀಲನೆ ಮಾಡಿ ದಂಡ ವಿಧಿಸಿ, ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ. ಅದ್ದರಿಂದ ಪ್ಲಾಸ್ಟಿಕ್ ಬ್ಯಾಗ್ ಮಾರಾಟ ಹಾಗೂ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಮಾರುವವರು ಹಾಗೂ ಸಾರ್ವಜನಿಕರು ಕೂಡ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪುರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ಪರಿಸರ ಅಭಿಯಂತರರಾದ ರೀತು ಸಿಂಗ್ ಕೋರಿದ್ದಾರೆ.