https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ರವಾಸೋದ್ಯಮ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ…

ಪ್ರವಾಸೋದ್ಯಮ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ…

News, Informatin , Enteetinement and Advertisement
29/05/202529/05/2025nadubadenews@gmail.comLeave a Comment on ಪ್ರವಾಸೋದ್ಯಮ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ…
Spread the love
ಪ್ರವಾಸೋದ್ಯಮ  ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ…

    ಮಡಿಕೇರಿ ಮೇ.29(Nadubade News): ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನಲ್ಲಿ ಪ್ರವಾಸೋದ್ಯಮ/ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ Food Craft Institute (FCI), Mysore ಹಾಗೂ  Institute of Hotel Management (IHM)  ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮ ಜಾರಿಗೊಳಿಸಲು ಸರ್ಕಾರವು ಅನುಮೋದನೆ ನೀಡಿದೆ. 

ಕೊಡಗು ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ 2 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 2 ಅಭ್ಯರ್ಥಿಗಳ ಗುರಿಯನ್ನು ಪ್ರಸ್ತುತ ಸಾಲಿನಲ್ಲಿ ನಿಗಧಿಪಡಿಸಿದೆ. ಈ ತರಬೇತಿ ಕಾರ್ಯಕ್ರಮಗಳ ವಿವರ/ಅಭ್ಯರ್ಥಿಗಳ ವಿದ್ಯಾರ್ಹತೆಯ ವಿವರ: ಫುಡ್ ಮತ್ತು ಬೇವರೇಜ್ ಸರ್ವಿಸ್ ಸ್ಟೀವರ್ಡ್‍ಗೆ ಕನಿಷ್ಠ 10ನೇ ತರಗತಿ ಪಾಸ್, 20 ರಿಂದ 45 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿಯ ಒಬ್ಬರು ಮತ್ತು ಪರಿಶಿಷ್ಟ ಪಂಗಡದ ಒಬ್ಬರು.

 ಮಲ್ಟಿ ಕ್ಯೂಸಿನ್ ಕುಕ್ ಕನಿಷ್ಠ 8ನೇ ತರಗತಿ ಪಾಸಾಗಿರಬೇಕು. 20 ರಿಂದ 45 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿಯ ಒಬ್ಬರು ಮತ್ತು ಪರಿಶಿಷ್ಟ ಪಂಗಡದ ಒಬ್ಬರು. ಈ ತರಬೇತಿಯನ್ನು ವಸತಿ, ಊಟೋಪಚಾರ ಹಾಗೂ ಯೂನಿಫಾರ್ಮ್ ನೀಡಲಾಗುವುದು. ತರಬೇತಿ ಪಡೆಯುವ ವೇಳೆ ರೂ.2000 ಗಳು ಮಾಹೆಯಾನ ಸ್ಟೈಫೆಂಡ್ ನೀಡಲಾಗುವುದು.

 ಈ ತರಬೇತಿಗಳನ್ನು ಪಡೆಯಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಉಪ ನಿದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ದ್ವಿ-ಪ್ರತಿಯಲ್ಲಿ ಜೂನ್, 13 ರೊಳಗೆ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ಕಚೇರಿಗೆ ಸಲ್ಲಿಸಲು ತಿಳಿಸಿದೆ.

ಹೆಚ್ಚಿನ ವಿವರಗಳಿಗೆ ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201. ದೂರವಾಣಿ ಸಂಖ್ಯೆ: 08272-200519 ಅಥವಾ ಈ-ಮೇಲ್: ddkodagutourism@gmail.com ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ಅವರು ತಿಳಿಸಿದ್ದಾರೆ.

Post navigation

ಪೇರಿಯಂಡ ಪೆಮ್ಮಯ್ಯ ದೇವಕ್ಕಿ ಹೆಸರಿನ ದತ್ತಿ ನಿಧಿ ಸ್ಥಾಪನೆ
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್ ನಾಳ್…

Related Posts

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

05/08/202505/08/2025nadubadenews@gmail.com
ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

ನಿಯಮದಂತೆ ಮನೆ ಹಂಚಿಕೆಯಾಗಿದೆ: ಎಸಿ ಸ್ಪಷ್ಟನೆ

01/03/202501/03/2025nadubadenews@gmail.com
ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

16/03/202516/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version