ಕುಶಾಲನಗರ. ಏ.11: ಅಲೆಮಾರಿ ಪ್ರವಾಸಿಗರಿಂದ ಕಾವೇರಿ ನದಿಯ ಸ್ವಾಸ್ತ್ಯ ಕೆಡುತಿದ್ದು, ಸಂಬದ್ದಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್ ಅವರು ಆಗ್ರಹಿಸಿದ್ದಾರೆ.
ಕೊಡಗಿಗೆ ಬರುತ್ತಿರುವ ಅನೇಕ ಪ್ರವಾಸಿಗರಿಗೆ ಕಾವೇರಿ ನದಿಯೇ ಎಲ್ಲಾ. ನದಿಯಲ್ಲೇ ನಿತ್ಯಕರ್ಮಗಳನ್ನು ಮಾಡುವುದು, ನದಿಯಲ್ಲಿಯೇ ತೊಳೆಯುವುತ್ತಾರೆ. ಇದೇ ನೀರನ್ನು ಕಾವೇರಿ ನಾಡಿನ ನಾವು ಕುಡಿಯುಬೇಕು ಎಂದಿರುವ ಅವರು, ಪ್ರತಿದಿನ ಬೆಳಗ್ಗೆ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಇವು, ನಿತ್ಯ ಕಾಣುತ್ತಿರುವ ದೃಶ್ಯಗಳು. ಬಯಲು ಮುಕ್ತ ಶೌಚ ಪಟ್ಟಣ, ಸಾರ್ವಜನಿಕ ಪ್ರದೇಶಗಳಲ್ಲಿ ಶೌಚ ಅಥವಾ ಗಲೀಜು ಮಾಡಿದಲ್ಲಿ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದು ಪುರಸಭೆ ಎಲ್ಲಾ ಕಡೆ ಬೋರ್ಡ್ ಹಾಕಿದೆ. ಆದರೆ ಈ ನಿಯಮ ಕುಶಾಲನಗರದಲ್ಲಿ ಕೇವಲ ಫಲಕಗಳಿಗೆ ಮಾತ್ರ ಸೀಮಿತವಾಗಿದೆ. ಕೊಡಗಿಗೆ ಪ್ರವಾಸಿಗರು ಬಸ್ಸಿನಲ್ಲಿ ಬಂದು ಗಡಿಭಾಗದ ಕುಶಾಲನಗರ ಕಾವೇರಿ ನದಿಯ ದಡದಲ್ಲಿ ಚೆಂಬು ಹಿಡಿದುಕೊಂಡು ಹೊಳೆಯ ಎಲ್ಲೆಡೆ ಓಡಾಡುತ್ತಿರುವುದು ಸಾರ್ವಜನಿಕರಿಗೆ ದಿನನಿತ್ಯದ ಕಿರಿಕಿರಿಯಾಗಿದೆ. ಕುಶಾಲನಗರಕ್ಕೆ ವಲಸೆ ಬಂದ ನೂರಾರು ಸಂಖ್ಯೆಯ ಕಾರ್ಮಿಕರಂತೂ ಕೆಲಸದ ನೆಲೆ ಮಾತ್ರ ಹುಡುಕಿಕೊಂಡಿದ್ದಾರೆ. ಉಳಿದುಕೊಳ್ಳಲು ಮನೆ ಬಗ್ಗೆ ಇನ್ನೂ ಚಿಂತೆ ಮಾಡಿಲ್ಲ. ಶೆಡ್ಡಿನಲ್ಲಿ ಮಲಗುವುದು ಮತ್ತು ಕಾವೇರಿ ನದಿಯನ್ನೇ ಶೌಚಾಲಯ ಮತ್ತೆ ಸ್ನಾನದ ಮನೆ ಮಾಡಿಕೊಂಡಿದ್ದಾರೆ. ಒಟ್ಟಾರೆ ನಾವು ಇವರು ಬಿಟ್ಟಿದ್ದನ್ನ ಕುಡಿಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅಸಮದಾನ ಹೊರಹಾಕಿರುವ ಅವರು, ದಯವಿಟ್ಟು ಕುಶಾಲನಗರ ಪುರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.