ಕೊಣಜಗೇರಿ, ನ.15: ಮಕ್ಕಳ ದಿನಾಚರಣೆಯ ಅಂಗವಾಗಿ, ಮೂರ್ನಾಡು ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯತಿಯ ಪಾರಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು, ಶಾಲಾ ಪ್ರಧಾನಿಯ ಅಧ್ಯಕ್ಷತೆಯಲ್ಲಿ, ವಿವಿಧ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.
ಶಾಲಾ ಸಂಸತ್ತಿನ ಸಚಿವ ಸಂಪುಟದ ನೇತೃತ್ವದಲ್ಲಿ, ಕಾಳು ಹೆಕ್ಕುವುದು, ಬಕೆಟಿಗೆ ಚೆಂಡು, ಕಂಬಕ್ಕೆ ರಿಂಗ್ ಹಾಕುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ನಂತರ ನಡೆದ ಸಭಾ ಕಾರ್ಯಕ್ರಮದವು, ಶಾಲಾ ಪ್ರಧಾನ ಮಂತ್ರಿ ಜೆ.ಸಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಗಳಾಗಿ, ಶಾಲಾ ಉಪಪ್ರಧಾನಿ ಹೆಚ್.ಪಿ. ಪೊನ್ನಪ್ಪ, ಗೃಹಸಚಿವ ತಶ್ವಿನ್, ಕ್ರೀಡಾ ಸಚಿವೆ ತಾನ್ಸಿ, ನೀರಾವರಿ ಸಚಿವರು ಗೌಶಿಕ್, ಭರತ್, ಆರೋಗ್ಯ ಸಚಿವೆ ರಚನ, ವಾರ್ತ ಸಚಿವೆ ನಂದಿನಿ ಅವರು ಉಪಸ್ಥಿತರಿದ್ದು ಮಕ್ಕಳ ದಿನಾಚರಣೆಯ ಸಂದೇಶ ನೀಡಿದರು.
ವೇದಿಕೆಯಲ್ಲಿ ವಿವಿದ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ರೀಡಾ ವಿಜೇತರು ಮತ್ತು ಸಾಮಸ್ಕೃತಿಕ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಿಗೂ, ಕಲಿಕಾ ಪರಿಕರ ಉಡುಗೊರೆಯೊಂದಿಗೆ, ಸಿಹಿ ವಿತರಿಸಿ ಸಂಭ್ರಮಿಸಲಾಯಿತು.
ಶಾಲ ಮುಖ್ಯೋಪಧ್ಯಯಾರಾದ, ವೇದಪ್ರಸಾದ್, ಶಿಕ್ಷಕರಾದ, ಕಿಶೋರ್ ಕುಮಾರ್, ಸುಮಿತ್ರ, ಮಂಜುಳ ಮತ್ತು ಸಿಬ್ಬಂಧಿಗಳ ಅವರ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.