
ಮಡಿಕೇರಿ, ಮೇ,20 (Nadubade News): ಕನಾ೯ಟಕ ಪೊಲೀಸ್ ಡಿಜಿ ಮತ್ತು ಐಜಿಪಿ ಅವರು ಅತ್ಯುತ್ತಮ ಕತ೯ವ್ಯ ನಿವ೯ಹಣೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಂದ ಮೊದಲ ಬಾರಿಗೆ ನೀಡುತ್ತಿರುವ ಪ್ರಶಸ್ತಿ ಇದಾಗಿದ್ದು, ಇದೇ ಮೊದಲ ವಷ೯ದ ಪ್ರಶಸ್ತಿಗೆ ಕೊಡಗಿನ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಮುದ್ದು ಮಹದೇವ, ವಿಶೇಷ ಮಕ್ಕಳ ಘಟಕ ಕಲ್ಯಾಣಾಧಿಕಾರಿ ಮತ್ತು ಹೆಡ್ ಕಾನ್ಸಟೇಬಲ್, ಸುಮತಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದ್ದು, ರಾಜ್ಯದಲ್ಲಿ ಅತ್ಯುತ್ತಮ ಕಾಯ೯ನಿವ೯ಹಣೆ ಮಾಡಿರುವ ಪೊಲೀಸರಿಗೆ ಪ್ರೋತ್ಸಾಹ ನೀಡಲು ಉನ್ನತಾಧಿಕಾರಿಗಳು ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.