ಗೋಣಿಕೊಪ್ಪದಲ್ಲಿ ಟಿಪ್ಪು ಸುಲ್ತಾನ್ ಪುಸ್ತಕ ಲೋಕಾರ್ಪಣೆ
ಗೋಣಿಕೊಪ್ಪ, ಜ.21: ಟಿಪ್ಪು ಸುಲ್ತಾನ್ ಆಡಳಿತ ಮತ್ತು ಪರಿಣಾಮಗಳ ಕುರಿತು ಲೇಖಕ ಡಾ. ವಿಕ್ರಂ ಸಂಪತ್ ಬರೆದಿರುವ ಸಂಸೋಧನಾ ಕೃತಿ ಟಿಪ್ಪು ಸುಲ್ತಾನ್ ಪುಸ್ತಕವನ್ನು ಗೋಣಿಕೊಪ್ಪದಲ್ಲಿ ಕೊಡಗು ಮೈಸೂರು ಸಂಸದ ಯಧುವೀರ್ ಜಯಚಾಮರಾಜ ಒಡೆಯರ್ ಅವರು ಬಿಡುಗಡೆ ಮಾಡಿದರು.
ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕ ಬಿಡುಗಡೆ ಮಾಡಿದ ಸಂಸದರು ಮತ್ತು ಮೈಸೂರ್ ಸಂಸ್ಥಾನದ ಮಹಾರಾಜರೂ ಆಗಿರುವ, ಯಧುವೀರ್ ಒಡೆಯರ್ ಅವರು, ಟಿಪ್ಪು ಸುಲ್ತನ್ ಆಡಳೀದ ಮತ್ತು ದೌರ್ಜ್ಯನ್ಯದ ನೈಜ ಅನಾವರಣ ಸಾಕ್ಷಿ ಪುರಾವೆಗಳೊಂದಿಗೆ ಲೇಖಕರು ದಾಖಲಿಸಿದ್ದು, ಪ್ರತಿಯೊಬ್ಬರೂ ಇತಿಹಾಸವನ್ನು ಮರು ಓದಬೇಕಾದ ಅಗತ್ಯವಿದೆ ಎಂದರು. ವಾಸ್ತವ ಇತಿಹಾಸದ ದಾಖಲೀಕರಣಕ್ಕೆ ಶ್ರಮಿಸಿ ಸಾಧಿಸಿದ ವಿಕ್ರಂ ಸಂಪತ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜೀ ಅಧ್ಯಕ್ಷರಾದ ಬಾಚರಣಿಯಂಡ ಅಪ್ಪಣ್ಣ ಅವರು, ನಮ್ಮ ಭೂತ ಕಾಲವನ್ನು ತೋರಿಸುವ ಕೈಗನ್ನಡಿ ಇತಿಹಾಸ. ಇಂತ ಇತಿಹಾಸಗಳು ವಾಸ್ತವದಿಂದ ಕೂಡಿರಬೇಕು, ದಾಖಲೆಗಳು ಅವುಗಳನ್ನು ಪುಷ್ಟೀಕರಿಸುವಂತಿರಬೇಕು. ಅಂತ ಸಾಹಸವನ್ನು ಮಾಡಿ ಗೆದ್ದಿರುವ ವಿಕ್ರಂ ಸಂಪತ್ ಅವರನ್ನು ಭವಿಷ್ಯದ ಇತಿಹಾಸ ಸದಾ ನೆನಪಪಿನಲ್ಲಿಡಲಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೃತಿ ಲೇಖಕ, ಈಗಾಗಲೇ ಟಿಪ್ಪು ಸುಲ್ತಾನ್ ಕೃತಿಯನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ ಅನಾವರಣ ಮಾಡಲಾಗಿದೆ. ಆದರೆ ಪುಣ್ಯಭೂಮಿ ಕೊಡಗಿನಲ್ಲಿ ಇಂದು ಬಿಡುಗಡೆಯಾಗಿರುವುದು ಅತ್ಯಂತ ಸಂತಸವಾಗಿದೆ. ಅಲ್ಲದೆ ದೇವಾಟ್‌ಪರಂಬು ನರಮೇಧವನ್ನು ಟಿಪ್ಪು ಸುಲ್ತಾನ್ ಸ್ವತಃ ಪುಷ್ಟೀಕರಿಸಿದ್ದು, ಆತನ ಬರಹದ ಪ್ರಕಾರ ಸುಮಾರು 70 ಸಾವಿರ ಜನರನ್ನು ದೇವಾಟ್‌ಪರಂಬಿನಲ್ಲಿ ನರಮೇದ ಮಾಡಿದ ಉಲ್ಲೇಖವಿದೆ. ಪುಸ್ತಕದಲ್ಲಿ ಪ್ರಕಟಿಸಿರುವ ಪ್ರತೀ ವಿಚಾರಕ್ಕೂ ದಾಖಲೆ ಒದಗಿಸಿದ್ದು ಮುಂದಿನ ಪೀಳಿಗೆ ವಾಸ್ತವ ಇತಿಹಾಸವನ್ನ ತಿಳಿಯಲಿದೆ ಎಂದರು.
ಕಾರ್ಯಕ್ರಮದ ಆಯೋಜಕರಾದ ಉಧ್ಯಮಿ ಮತ್ತು ಸಮಾಜ ಸೇವಕಿ ಕುಪ್ಪಂಡ ಛಾಯಾನಂಜಪ್ಪ ಅವರು ಮಾತನಾಡಿ, ಮೈಸೂರು ಮತ್ತು ಕೊಡಗಿನ ವಾಸ್ತವ ಇತಿಹಾಸವನ್ನು ಹೊತಿರುವ ಟಿಪ್ಪುಸುಲ್ತಾನ್ ಪುಸ್ತಕ ಕೊಡಗಿನಲ್ಲಿ ಬಿಡುಗಡೆಯಾದರೆ ಆದರೆ ಹೆಚ್ಚು ಸೂಕ್ತ ಎಂಬ ಉದ್ದೇಶದಿಂದ, ಡಾ. ವಿಕ್ರಂ ಹೆಗಡೆ ಮತ್ತು ಸಂಸದ ಯಧುವೀರ್ ಒಡೆಯರ್ ಅವರನ್ನು ಕರೆತಂದು ಇಲ್ಲಿ ಆಯೋಜಿಸಲಾಗಿದೆ. ನಮ್ಮ ಪೂರ್ವ ಇತಿಹಾಸದ ವಾಸ್ತವತೆ ಅರಿವಾಗಲಿ ಎನ್ನುವ ಉದ್ದೇಶದೊಂದಿಗೆ, ಗತಿಸಿದ ಕಾಲವನ್ನು ಮರೆತು ನವ ಸಮರ್ಥ ಅಭಿವೃದ್ದಿಪೂರಿತ ವಿಶ್ವಗುರು ಭಾರತವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರಲ್ಲದೆ ಕಾರ್ಯಕ್ರಮಕ್ಕೆ ಪರ್ತಯಕ್ಷ ಪರೋಕ್ಷವಾಗಿ ಸಹಕರಿಸಿದ, ಆವ್ಹಾನವನ್ನು ಪರಿಗಣಿಸಿ ಆಗಮಿಸಿದ ಸರ್ವರರಿಗೂ ಧನ್ಯವಾದ ಅರ್ಪಿಸಿದರು.