
ಸಾಹಿತಿ,ಕವಿ, ಪ್ರಕಾಶಕ, ವಿಮರ್ಶಕ, ರಾಜ್ಯ ಸಾರಿಗೆ ಸಂಸ್ಥೆಯ ಉದ್ಯೋಗಿ, ಮನೆಮನೆ ಕವಿಘೋಷ್ಟಿ ಮತ್ತು ಸಾಹಿತ್ಯ ವರ್ಧಕ ಪರಿಷತ್ತುಗಳ ಸಂಸ್ಥಾಪಕರೂ ಆಗಿರುವ ಪಿ.ಎಸ್. ವೈಲೇಶ್ ಕೊಡಗು ಅವರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಸೇವಾಭೂಷಣ ಪ್ರಶಸ್ತಿ ಘೋಷಿಸಿದೆ.
ಮೈಸೂರಿನ, ಕರ್ನಾಟಕರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13 ನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಹಿಂದುಳಿದ ವರ್ಗದವರಿಗೆ ರಾಜರ್ಷಿ ಕೃಷ್ಣರಾಜ ಒಡೆಯರ್‌ರವರು ಅನುಷ್ಟಾನಕ್ಕೆ ತಂದಿರುವ ಮೀಸಲಾತಿಯ 105ನೆಯ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ “ಸೇವಾಭೂಷಣ ಪ್ರಶಸ್ತಿ”ಗೆ ಕೊಡಗಿನ ಪಿ.ಎಸ್. ವೈಲೇಶ್ ಅವರ ಸಾಹಿತ್ಯ, ಸಂಘಟನೆ, ಸೇವಾ ಕ್ಷೇತ್ರಗಳ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಿನಾಂಕ 28/9/2024ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿರುವ, ಕಿರು ರಂಗ ಮಂದಿರದಲ್ಲಿ ನಡೆಯುವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶ್ರೀಯುತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಎಚ್.ಎಲ್. ಯಮುನಾ ತಿಳಿಸಿದ್ದಾರೆ.




