
ನಾಪೋಕ್ಲು, ಏ.26: ಕೊಡಗು ಜಿಲ್ಲೆಯ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನಾ ಉತ್ಸವ ಮತ್ತು ನೂತನವಾಗಿ ನಿರ್ಮಾಣಗೊಂಡ ಪೌಳಿಯ ಉದ್ಘಾಟನಾ ಕಾರ್ಯಕ್ರಮವು ಮೇ, 01 ರಂದು ನಡೆಯಲಿದೆ. ಉತ್ಸವದ ಅಂಗವಾಗಿ ತುಲಾಭಾರ ಸೇವೆ ವಿವಿಧ ಪೂಜಾ ಕಾರ್ಯ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಮೇ 1 ರಂದು ಗುರುವಾರ ಬೆಳಗ್ಗೆ 6 ಗಂಟೆಗೆ ಅಭಿಷೇಕ, ಬೆಳಗ್ಗೆ 6.30 ರಿಂದ 7.30 ಗಂಟೆಗೆ ಗಣಪತಿಹೋಮ, 8.30 ರಿಂದ 11 ಗಂಟೆಗೆ ರುದ್ರಮಹಾಯಾಗ, 9.30 ರಿಂದ 10.30 ಗಂಟೆಗೆ ತುಲಾಭಾರ ಸೇವೆ, 11.30 ಗಂಟೆಗೆ ನವ ನಿರ್ಮಿತ ಪೌಳಿಯ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ, 12.30 ಗಂಟೆಗೆ ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ, 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.