Site icon nadubadenews.com

ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.

ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.
ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯಕ್ಕೆ ಒತ್ತಾಯ.

ಸೋಮವಾರಪೇಟೆ, ಜೂ. 19: (nadubadenews): ಆರೋಗ್ಯ ಸಂಜೀವಿನಿ ಸೇವೆಯನ್ನು ನಿವೃತ್ತ ನೌಕರರಿಗೂ ವಿಸ್ತರಿಸಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ಕೆ. ಮಲ್ಲಪ್ಪ ಆಗ್ರಹಿಸಿದರು.

ಸರ್ಕಾರ ಮತು ಸಾರ್ವಜನಿಕರ ಸೇವೆಯಲ್ಲಿ ತಮ್ಮ ಜೀವನವನ್ನೇ ಸವೆಸುವ ನೌಕರರ ನಿವೃತ್ತ ಬದುಕಿನಲ್ಲಿ ಕಾಡುವ ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಸಲು ಆರೋಗ್ಯ ಸಂಜೀವಿನಿ ಉಪಯುಕ್ತ ಎಂದು ಅವರು ಅಭಿಪ್ರಾಯಿಸಿದರು. ಮುಂದುವರೆದು ಮಾತನಾಡಿದ ಅವರು, ಸಂಘ-ಸಂಸ್ಥೆಗಳ ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರಾದ ಕೆ. ಟಿ. ಚೆಲುವೆಗೌಡ, ಎ.ಬಿ. ಶಿವದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಸಿ. ಕೆ. ಮಲ್ಲಪ್ಪ ಬರೆದ ನಾಡ ಹನಿ. ಕಾಥಾ ಸಂಕಲವನ್ನು ಗೌರವ ಅಧ್ಯಕ್ಷರಾದ ಹಾಲೆ ಬೇಲೂರು ನಿರ್ವಾಣಶೆಟ್ಟಿ ಬಿಡುಗಡೆ ಮಾಡಿದರು. ಸನ್ಮಾನಿತರ ಪರವಾಗಿ ಎ.ಬಿ. ಶಿವದೇವಿ ಮಾತನಾಡಿದರು. ಸಂಘದಲ್ಲಿ 150 ಸದಸ್ಯರಿದ್ದು 38 ಸ್ತ್ರೀಯರು 12 ಕುಟುಂಬ ಪಿಂಚಣಿದಾರರು ಇರುವುದಾಗಿ ಅಧ್ಯಕ್ಷರು ತಿಳಿಸಿದರು. 2024 -25ನೇ ಸಾಲಿನಲ್ಲಿ ಆರು ಸದಸ್ಯರು ದೈವಾಧೀನರಾಗಿದ್ದು, 20 ಹೊಸ ಸದಸ್ಯರಾಗಿರುವುದು ಹೆಮ್ಮೆಯ ವಿಷಯವೆಂದರು.

ಕಾರ್ಯಕ್ರಮವನ್ನು ನಿರ್ದೇಶಕರಾದ ಟಿ. ಕೆ. ಮಾಚಯ್ಯ ನಿರೂಪಿಸಿ,, ಆಡಳಿತ ಮಂಡಳಿಯ ವರದಿಯನ್ನು ಸಹ ಕಾರ್ಯದರ್ಶಿ ಎಸ್. ಬಿ. ರಾಜಪ್ಪ ಮಂಡಿಸಿದರು. ಕಾರ್ಯದರ್ಶಿ ಬಿ ಎಂ ಆನಂದ ಸ್ವಾಗತಿಸಿ, ಖಜಾಂಜಿ ಯಶ್. ಆರ್. ಕೆಂಚೇಗೌಡ ಕಳೆದ ಸಾಲಿನ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಹೆಚ್. ಎನ್. ತಂಗಮ್ಮ ಕಳೆದ ಸಾಲಿನ ಮಹಾಸಭೆ ವರದಿಯನ್ನು ನೀಡಿದರು. ಮೃತ ಪಟ್ಟ ಸದಸ್ಯರಿಗೆ ಸಂತಾಪ ಸೂಚಿಸಿ ಮೌನ ಆಚರಿಸಲಾಯಿತು. ಉಪಾಧ್ಯಕ್ಷರಾದ ಎಚ್. ಜಿ. ಕುಟ್ಟಪ್ಪ ವಂದಿಸಿದರು.

Exit mobile version