https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಿರೀಕ್ಷೆಗಳು ಹುಸಿ, ಸಾಲದ ಹೊರೆ : ಮಂಡೆಪಂಡ ಸುಜಾ ಕುಶಾಲಪ್ಪ

ನಿರೀಕ್ಷೆಗಳು ಹುಸಿ, ಸಾಲದ ಹೊರೆ : ಮಂಡೆಪಂಡ ಸುಜಾ ಕುಶಾಲಪ್ಪ

News, Informatin , Enteetinement and Advertisement
06/03/202606/03/2026nadubadenews@gmail.comLeave a Comment on ನಿರೀಕ್ಷೆಗಳು ಹುಸಿ, ಸಾಲದ ಹೊರೆ : ಮಂಡೆಪಂಡ ಸುಜಾ ಕುಶಾಲಪ್ಪ
Spread the love
ನಿರೀಕ್ಷೆಗಳು ಹುಸಿ, ಸಾಲದ ಹೊರೆ : ಮಂಡೆಪಂಡ ಸುಜಾ ಕುಶಾಲಪ್ಪ

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಮಂಡಿಸಿರುವ ಈ ವರ್ಷದ ಆಯವ್ಯಯವು ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ಶಾಸಕ ಮಂಡೆಪಂಡ ಸುಜಾಕುಶಾಲಪ್ಪ ಹೇಳಿದ್ದಾರೆ. ಪತ್ರಕಾ ಹೇಳಿಕೆ ನೀಡಿರುವ ಅವರು,  ರೈತರು, ಯುವಕರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಸಮಸ್ಯೆಗಳ ಪರಿಹಾರಕ್ಕೆ ಸ್ಪಷ್ಟವಾದ ಯೋಜನೆಗಳು ಈ ಬಜೆಟ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಈ ಬಜೆಟ್‌ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿಲ್ಲ.  ಕೇವಲ ಘೋಷಣೆಗಳ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನವೇ ಈ ಆಯವ್ಯಯದಲ್ಲಿ ಗೋಚರಿಸುತ್ತದೆ. 2025-26 ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂ 50.00 ಕೋಟಿ ಗಳ ಅನುದಾನವನ್ನು ಘೋಷಣೆ ಮಾಡಿ ಅದರಲ್ಲಿ ಕೊಡವ ಹೆರಿಟೇಜ್ ಕಾಮಗಾರಿಯನ್ನು ರೂ 5.00 ಕೋಟಿ ಗಳಲ್ಲಿ ಮುಂದುವರಿಸುವ ಭರವಸೆ ನೀಡಿ ಬಿಡಿಗಾಸು ಬಿಡುಗಡೆಯಾಗದೆ ಇರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಈ ವರ್ಷದ ಆಯವ್ಯಯದಲ್ಲಿ ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರಾಜ್ಯದ ಸಾಲಭಾರ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ, ಸರ್ಕಾರ ಜವಾಬ್ದಾರಿಯುತ ಆರ್ಥಿಕ ನಿರ್ವಹಣೆಯನ್ನು ತೋರಿಸಬೇಕಿತ್ತು. ಆದರೆ ಈ ಬಜೆಟ್‌ನಲ್ಲಿ ದೂರದೃಷ್ಟಿಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಒಟ್ಟಾರೆಯಾಗಿ ನಾಗರಿಕರನ್ನು ಸಾಲದ ಕೂಪಕ್ಕೆ ತಳ್ಳಲಾಗಿದೆ ಎಂದಿದ್ದಾರೆ.

Post navigation

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ
ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್

Related Posts

ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…

24/02/202524/02/2025nadubadenews@gmail.com
2026ರ ವಾರ್ಷಿಕ ದಿನ ದರ್ಶಿ, ಕೊಡವ ಮತ್ತು ಕನ್ನಡ ದ್ವಿಭಾಷೆಯಲ್ಲಿ

2026ರ ವಾರ್ಷಿಕ ದಿನ ದರ್ಶಿ, ಕೊಡವ ಮತ್ತು ಕನ್ನಡ ದ್ವಿಭಾಷೆಯಲ್ಲಿ

02/01/202602/01/2026nadubadenews@gmail.com
ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

15/04/202515/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us