ಮಡಿಕೇರಿ, ಡಿ. 07: ಮೂಲನಿವಾಸಿ ಅರಮನೆ ಪಾಲೆ ಸಮಾಜದ ವಾರ್ಷಿಕ ಕ್ರೀಡಾ ಕೂಟವು ದಿನಾಂಕ : 08.12.2024ನೇ ಭಾನುವಾರ ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ನಾಳೆ ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿ ಶಾಸಕರಾದ ಡಾ|| ಮಂಥರ್ ಗೌಡ ಅವರು ಉದ್ಘಾಟಿಸಲಿದ್ದು, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ ಅಧ್ಯಕ್ಷರಾದ ಅರಮನೆಪಾಲೆಯರ ಜಿ. ಚೆನಿಯಾ, ನಾಪೋಕ್ಲು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಶ್ರೀ ಎ.ಎಸ್. ಪೊನ್ನಣ್ಣ ಸನ್ಮಾನ್ಯ ಶಾಸಕರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಕರ್ನಾಟಕ ಸರ್ಕಾರ, ಶ್ರೀ ಅಜ್ಜನಿಕಂಡ ಸಿ. ಮಹೇಶ್ ನಾಚಯ್ಯ ಅಧ್ಯಕ್ಷರು, ಕೊಡವ ಸಾಹಿತ್ಯ ಅಕಾಡೆಮಿ (ರಿ), ಕೊಡಗು, ಮಡಿಕೇರಿ, ಶ್ರೀ ಲೆಫ್ಟಿನೆಂಟ್ ಕರ್ನಲ್ ಎಂ.ಎಸ್. ಕಾವೇರಿಯಪ್ಪ ಭಾರತೀಯ ಸೇನೆ, ಮಡಿಕೇರಿ, ಡಾ|| ಮೇಚಿರ ಸುಭಾಷ್ ನಾಣಯ್ಯ ಅಧ್ಯಕ್ಷರು, ಕೊಡವ ಭಾಷಿಕಾ ಸಮುದಾಯಗಳ ಕೂಟ (ರಿ) ಕೊಡಗು, ಹಾಗೂ ಮಾಜಿ ಸದಸ್ಯರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಶ್ರೀ ಅರಮನೆಪಾಲೆರ ದೇವಯ್ಯ ನಿರ್ದೇಶಕರು, ಕೊಡವ ಭಾಷಿಕಾ ಸಮುದಾಯಗಳ ಕೂಟ (ರಿ), ಶ್ರೀ ಮಂದಣ್ಣ ಪಿ.ಕೆ. ಪ್ರಧಾನ ಸಂಘಟಕರು, ಕೊಡಗು ಮೂಲನಿವಾಸಿ ಆರಮನೆಪಾಲೆ ಸಮಾಜ (ರಿ) ಹಾಗೂ ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಮಡಿಕೇರಿ. ಅವರುಗಳು ಉಪಸ್ಥಿತರಿರುವರು.
ನಂತರ ಜನಾಂಗಬಾಂದವರಿಗೆ ವಿವಿಧ ಕ್ರೀಡಾಕೂಟ ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ಶ್ರೀ ಪಿ.ಟಿ. ಡಾಲು ಅಧ್ಯಕ್ಷರು, ಕಕ್ಕಬೆ – ಕುಂಜಿಲ-ನೆಲಜಿ ಗ್ರಾಮ ಸಮಿತಿ, ಶ್ರೀ ಶಿವಪ್ಪ ಕಂಡಿಮಕ್ಕಿ ಅಧ್ಯಕ್ಷರು, ಕಂಡಿಮಕ್ಕಿ ಗ್ರಾಮ ಸಮಿತಿ, ಶ್ರೀ ದೇವಯ್ಯ ಹಾಕತ್ತೂರು ಕಾರ್ಯದರ್ಶಿ, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ (ರಿ), ಶ್ರೀ ಸುಬ್ಬಯ್ಯ ಪಿ.ಸಿ. ಕಾರ್ಯದರ್ಶಿ, ಮರಣ ಧನಸಹಾಯ ನಿಧಿ ಅವರುಗಳು ಬಹುಮಾನ ದಾನಿಗಳಾಗಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಯತೀಶ್ ಕುಮಾರ್ (ನವೀನ್) ಚೆಯ್ಯಂಡಾಣೆ ಅಧ್ಯಕ್ಷರು, ಕ್ರೀಡಾ ಸಮಿತಿ, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ (ರಿ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಅಶೋಕ್ ಕೆ.ಜಿ. ಅಧ್ಯಕ್ಷರು, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಕಪಿಲ್ ಕುಮಾರ್ ದುಗ್ಗಳ ವಕೀಲರು, ಮಡಿಕೇರಿ, ಶ್ರೀ ತೇಜಸ್ ಕೋಚನ ದೈಹಿಕ ಶಿಕ್ಷಕರು, ಶ್ರೀ ರಮೇಶ್ ದೈಹಿಕ ನಿರ್ದೇಶಕರು. ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ, ಶ್ರೀ ಮಂಜು ದೈಹಿಕ ನಿರ್ದೇಶಕರು, ಮೂರ್ನಾಡು ವಿದ್ಯಾಸಂಸ್ಥೆ, ಶ್ರೀ ಪ್ರವೀಣ್ ಮುತ್ತಾರ್ಮುಡಿ ಅಧ್ಯಕ್ಷರು, ಕ್ರಿಕೆಟ್ ಪಂದ್ಯಾಟಗಳ ಸಮಿತಿ, ಕೊಡಗು ಮೂಲನಿವಾಸಿ ಆರಮನೆಪಾಲೆ ಸಮಾಜ (ರಿ), ಶ್ರೀ ದೇವಯ್ಯ ಹಾಕತ್ತೂರು, ಕಾರ್ಯದರ್ಶಿಗಳು, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ (ರಿ), ಶ್ರೀ ಯತೀಶ್ ಬಿದ್ದಪ್ಪ ಅಧ್ಯಕ್ಷರು, ಮರಣಧನ ಸಹಾಯನಿಧಿ, ಶ್ರೀ ರಘು ಹಾಕತ್ತೂರು ಕಾರ್ಯದರ್ಶಿಗಳು, ಕ್ರಿಕೆಟ್ ಪಂದ್ಯಾಟಗಳ ಸಮಿತಿ, ಶ್ರೀ ಮುತ್ತಪ್ಪ ಅಧ್ಯಕ್ಷರು, ಪೇರೂರು-ನಾಪೋಕ್ಲು ಗ್ರಾಮ ಸಮಿತಿ, ಶ್ರೀ ಪಿ.ಸಿ. ಶಿವಪ್ಪ ಕಂಡಿಮಕ್ಕಿ ಅಧ್ಯಕ್ಷರು, ಕಂಡಿಮಕ್ಕಿ ಗ್ರಾಮ ಸಮಿತಿ, ಶ್ರೀ ದೇವಯ್ಯ ಹಾಕತ್ತೂರು ಅಧ್ಯಕ್ಷರು, ಹಾಕತ್ತೂರು, ಬಿಳಿಗೇರಿ, ಮುತ್ತಾರ್ಮುಡಿ, ಪಾಲೆಮಾಡು ಗ್ರಾಮ ಸಮಿತಿ, ಅಧ್ಯಕ್ಷರು, ನೆಲಜಿ, ಕುಂಜಿಲ, ಕಕ್ಕಬೆ ಗ್ರಾಮ ಸಮಿತಿ, ಶ್ರೀ ರಮೇಶ್ ಅಧ್ಯಕ್ಷರು, ನಾಗಬಾಣೆ ಗ್ರಾಮ ಸಮಿತಿ, ಶ್ರೀ ನಾಣಿ ಅಧ್ಯಕ್ಷರು, ಬಾಳುಗೋಡು ಗ್ರಾಮ ಸಮಿತಿ, ಶ್ರೀ ನಿಶಾನ್ ಅಧ್ಯಕ್ಷರು, ಮಾದಾಪುರ-ಹಾಲೇರಿ ಗ್ರಾಮ ಸಮಿತಿ, ಶ್ರೀ ಪೂವಣ್ಣ ಅಧ್ಯಕ್ಷರು, ಚೇಲವಾರ ಗ್ರಾಮ ಸಮಿತಿ, ಶ್ರೀಮತಿ ಚೀನಾ ಆನಂದ ಅಧ್ಯಕ್ಷರು, ಚೆಯ್ಯಂಡಾಣೆ ಗ್ರಾಮ ಸಮಿತಿ ಅವರುಗಳು ಪಾಲ್ಗೊಳ್ಳಲಿದ್ದು, ಬಹುಮಾನ ವಿತರಣೆ ಮತ್ತಿತರ ಸಭಾಕಾರ್ಯಕ್ರಮ ನಡೆಯಲಿದೆ. ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘಟಕರು ಕೋರಿದ್ದಾರೆ.