ಮಡಿಕೇರಿ, ನ.14: ಮೈಸೂರು ಕೊಡಗು ಲೋಕಾಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರು, ದಿನಾಂಕ: 15/11/2024ರ ಶುಕ್ರವಾರದಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ನಾಳೆ ಬೆಳಿಗ್ಗೆ 9.30ಗಂಟೆಗೆ ಕುಶಾಲನಗರ ದುಬಾರೆ ಆನೆ ಶಿಬಿರಕ್ಕೆ ಭೇಟಿ, 10.30ಕ್ಕೆ ಮಕ್ಕಂದೂರು, 11.30 ಕೆ.ನಿಡುಗಣೆ, ಮದ್ಯಾಹ್ನ 12.30 ಗಾಳಿಬೀಡು, 1.30 ಭೋಜನ, 2.30, ಹಾಕತ್ತೂರು,ಮೇಕೇರಿ, ಸಂಜೆ 4.00 ಮರಗೋಡು, ಹೊಸ್ಕೇರಿ, 5.00 ಕಡಗದಾಳು, 6.00 ಮಡಿಕೇರಿ ನಗರಗಳಲ್ಲಿ, ಸಂಚರಿಸಿ, ಸಾರ್ವಜಿನಕರು, ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಆಯಾ ಸಮಯಕ್ಕೆ ಸರಿಯಾಗಿ ಆಯಾ ಭಾಗದ ಸಾರ್ವಜನಿಕರು ನಿಗದಿತ ಸ್ಥಳಕ್ಕೆ ಬಂದು ಮಾನ್ಯ ಸಂಸದರಿಗೆ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಕೊಡಗು, ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ, ನಾಪಂಡ .ರವಿ ಕಾಳಪ್ಪ ಕೋರಿದ್ದಾರೆ.