
ವಿರಾಜಪೇಟೆ, ಏ.12 (ನಡುಬಾಡೆ ನ್ಯೂಸ್) : ಇತ್ತೀಚೆಗೆ ಅಗಲಿದ ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಲಾವಿದರಾಗಿ ರಾಜ್ಯೋತ್ಸವ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ದಿ. ಅಪಾಡಂಡ ರಘು ರವರಿಗೆ ಶ್ರದ್ಧಾಂಜಲಿ ಸಭೆ ನಾಳೆ ವಿರಾಜಪೇಟೆಯಲ್ಲಿ ಕೊಡಗು ಕಲಾವಿಧರ ಸಂಘದ ಆಶ್ರಯದಲ್ಲಿ ನಡೆಯಲಿದೆ.
13.04.2025ರ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ವಿರಾಜಪೇಟೆಯ ನಿಸರ್ಗ ಬಡಾವಣೆಯಲ್ಲಿರುವ ಕೆ.ಕೆ. ಗ್ರೂಫ್ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕಲಾವಿದರಾದ ವಾಂಚಿರ ವಿಠಲ್ ನಾಣಯ್ಯ ಅವರ ಅಧಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅತಿಥಿಗಳಾಗಿ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷರು, ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ, ಶ್ರೀ ಕೇಶವ ಕಾಮತ್ ಅಧ್ಯಕ್ಷರು, ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ತು, ಉಳ್ಳಿಯಡ ಪೂವಯ್ಯ ಸಂಪಾದಕರು. ಬ್ರಹ್ಮಗಿರಿ ವಾರಪತ್ರಿಕೆ, ಶ್ರೀ ಅನಂತಶಯನ ಅಧ್ಯಕ್ಷರು. ಜಾನಪದ ಪರಿಷತ್ತು, ಮನೆಯಪಂಡ ದೇಚಮ್ಮ ಅಧ್ಯಕ್ಷರು, ಪಟ್ಟಣ ಪಂಚಾಯತ್, ವಿರಾಜಪೇಟೆ, ಕೊಟ್ಟುಕತ್ತಿರ ಪ್ರಕಾಶ್ ಅಧ್ಯಕ್ಷರು, ಜಿಲ್ಲಾ ಕಲಾವಿದರ ಸಂಘ, ಅಜ್ಜಮಾಡ ರಮೇಶ್ ಕುಟ್ಟಪ್ಪ ಹಿರಿಯ ಪತ್ರಕರ್ತರು, ಕೊಟ್ರಮಾಡ ಲಾಲಾ ಪೂಣಚ್ಚ ಮತ್ತು ಶ್ರೀ ಶಾಂತಾ ಪೂವಯ್ಯ ಮಾಲೀಕರು ಚಿಮ್ಮಿ ಗಾರ್ಮೆಂಟ್ಸ್, ಮತ್ತಿಕೆರೆ, ಬೆಂಗಳೂರು, ಕಾಳಮ್ಮಂಡ ಜಗತ್, ಉಧ್ಯಮಿ, ವಿರಾಜಪೇಟೆ ಅವರುಗಳು ಉಪಸ್ತಿತರಿದ್ದು ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಕೋರಲಿದ್ದಾರೆ.
ಕಲಾಭಿಮಾನಿಗಳು, ಆಪಾಡಂಡು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಅಗಲಿರುವ ಮಹಾನ್ ಚೇತನಕ್ಕೆ ಶಾಂತಿ ಕೋರಬೇಕಾಗಿ ಕೊಡಗು ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಮಂಡಳಿ ಮನವಿ ಮಾಡಿದೆ.