ಮಡಿಕೇರಿ, ಏ.11: ನಗರ, ಪಟ್ಟಣ ಪ್ರದೇಶಗಳಲ್ಲಿ ಎಗ್ಗಿಲದಂತೆ ಸುತ್ತಾಡುವ ಬೀಡಾಡಿ ದನಗಳನ್ನು ಕಂಡರೆ ಸೆರೆಹಿಡಿದು ಗೋಶಾಲೆಗೆ ರವಾನಿಸಲಾಗುವುದೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಈಗಾಗಲೇ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಹಿತಿ ನೀಡಿದ ಪ್ರಕಾರ, ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬೀಡಾಡಿ ದನಗಳನ್ನು ಮಾಲೀಕರುಗಳು ಕೂಡಲೇ ತಮ್ಮ ಜಾಗಗಳಲ್ಲಿ ಕಟ್ಟಿ ಹಾಕಿಕೊಳ್ಳಬೇಕು ಅಥವಾ ತಮ್ಮ ದನದ ದೊಡ್ಡಿಯಲ್ಲಿ ಇರಿಸಿಕೊಳ್ಳತಕ್ಕದ್ದು. ಕೊಡಗು ಜಿಲ್ಲಾ ಪೊಲೀಸ್ ಆದೇಶದ ಪ್ರಕಾರ ಕ್ರಮಕ್ಕೆ ಇಂದು ಕೊನೆಯ ದಿನವಾಗಿದ್ದು ನಾಳೆಯಿಂದ ನಗರದಲ್ಲಿ ಕಂಡುಬರುವ ಬೀಡಾಡಿ ದನಗಳನ್ನು ಪೋಲಿಸ್ ಇಲಾಖೆ ಹಾಗೂ ಇದಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ ಗೋ-ಶಾಲೆಗೆ ಸೇರಿಸಲಾಗುವುದು ಎಂದು ಈ ಇಲಾಖೆಯ ಪ್ರಕಟಣೆಯ ಮೂಲಕ ತಿಳಿಯಪಡಿಸಲಾಗಿದೆ.