https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ

ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ

News, Informatin , Enteetinement and Advertisement
06/06/202506/06/2025nadubadenews@gmail.comLeave a Comment on ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ
Spread the love
ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ

ಕರಡ: ಜೂ.06: (nadubade news) ವರದಿ: ಅಶ್ರಫ್:-‌ ನಾಪೋಕ್ಲು ವ್ಯಾಪ್ತಿಯ, ಕರಡ, ಚೆಯ್ಯಂಡಾಣೆ, ನಾಲಡಿ, ಕಕ್ಕಬ್ಬೆಯ ಶಾಲಾ ಆವರಣದಲ್ಲಿ ವಿಶ್ವಪರಿಸರ ದಿನಾಚರಿಸಲಾಗಿದೆ.

          ಕರಡ: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಮ್ಮನ ಹೆಸರಿನಲ್ಲಿ ಒಂದು ಮರ ಎಂಬ ಧ್ಯೇಯ ವಾಕ್ಯದಂತೆ  ವಿದ್ಯಾರ್ಥಿಗಳು ಇಕೋ ಕ್ಲಬ್ ವತಿಯಿಂದ ನೀಡಿದ ಸಸಿಗಳನ್ನು ನೆಟ್ಟರು. ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಈ ಸಂದರ್ಭ ಅತಿಥಿ ಶಿಕ್ಷಕಿ ಫಶೀಲಾ,ಸಿಬ್ಬಂದಿ ಕಾವೇರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

            ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುದರ ಮೂಲಕ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಎಚ್.ಆರ್.ಪ್ರೇಮಾಕುಮಾರಿ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು. ಈ ಸಂದರ್ಭ ಶಿಕ್ಷಕರಾದ ಪೂರ್ಣೇಶ್, ದಮಯಂತಿ, ಜಯಪ್ರದ, ಸತ್ಯಮ್ಮ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಕ್ಕಬೆ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನ

ಕಕ್ಕಬ್ಬೆ: ಕಕ್ಕಬೆಯ ಡಾ:ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು  ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ರಝಿನಾ ವಿಶ್ವ ಪರಿಸರ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಶಾಲೆಯ  ಶಿಕ್ಷಕಿಯರಾದ ಆಶಾ,ಜಲಜಾಕ್ಷಿ, ಸಿಬ್ಬಂದಿಗಳಾದ ಸಬಿತಾ, ಹೇಮಾವತಿ, ಜಯಂತಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

            ನಾಲಡಿ:  ನಾಲಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಶಾಲೆಯ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ಈ ಸಂದರ್ಭ ಶಾಲೆಯ ಅತಿಥಿ ಶಿಕ್ಷಕಿ ಗೌರಮ್ಮ, ಸಾರಿಕಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post navigation

ಕಾಳಿ ಮಾಡ ಅರಸು ಗಣಪತಿ ಅಯಿಂಗಡ ಒಂದಾನೆ ಕಾಲತ ಕಣ್ಣೀರ್‌ರ ನೆಪ್ಪು…
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್ ನಾಳ್- 26

Related Posts

ಬೆಂಗಳೂರ್ ಸಮಾಜ ಚುನಾವಣೆ ಬೋಂಡ, ಮಾಸಭೆ ಕಾಕೋಕ್‌ ಕಾಗದ ಚಳುವಳಿ…

29/05/202529/05/2025nadubadenews@gmail.com
ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!

ಮೇದುರ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ಬಲಿ ಬಯಸಿದೆಯಾ ಸ್ಥಳೀಯ ಆಡಳಿತ..?!

30/06/202530/06/2025nadubadenews@gmail.com
ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

16/03/202516/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version