
✍️ ಚಾಮೆರ ದಿನೇಶ್ ಬೊಳ್ಯಪ್ಪ
ನಡುಬಾಡೆ ನ್ಯೂಸ್: ಮಾ.22: ಇತ್ತೀಚೆಗೆ ಹಿಂದು ಸಂಗಮ ಕಾರ್ಯಕ್ರಮ ಆಯೋಜನೆ ಸಂದರ್ಭದಲ್ಲಿ, ನಾಪೋಕ್ಲು ಪಟ್ಟಣದಲ್ಲಿ ಅಪ್ಪಚ್ಚಿರ ಗೌತಮ್ ಎಂಬವರಿಗೆ ಹಲ್ಲೆಮಾಡಿ ಜೈಲು ಸೇರಿದ್ದ ಆರೋಪಿಯೊಬ್ಬನ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದು, ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬರುತ್ತಿದೆ. ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ಆರೋಪಿಯದ್ದು ಎನ್ನಲಾದ ವೀಡಿಯೋ @D_king ಅನ್ನೋ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಆಗಿದ್ದು, ಇದರಲ್ಲಿ ಬರೆದಿರುವ “ಸಂಧಾನವನ್ನ ಮರೆತುಬಿಡಿ, ಉತ್ತಮ ವಕೀಲರನ್ನು ಆರಿಸಿ ಮತ್ತು ಹಿಂಸೆಯನ್ನು ಮುಂದುವರೆಸಿ” ಎಂಬರ್ಥದ ವಾಕ್ಯ ಹಾಗೂ ವೀಡಿಯೋದ ಹಿನ್ನೆಲೆ ಡೈಲಾಗ್ಗಳು, ಪ್ರಚೋದನಾತ್ಮಕವಾಗಿದ್ದು, ಮತ್ತೊಮ್ಮೆ ಸಂಘರ್ಷಕ್ಕೆ ಎಡೆಮಾಡಿಕೊಡುವಂತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತ ಗೊಂಡಿದ್ದು, ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಸತ್ಯಾ ಸತ್ಯತೆಯನ್ನು ಪರಿಶೀಲಿಸಿ, ಆರೋಪಿಯ ಜಾಮೀನು ರದ್ದತಿಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
