ವಿರಾಜಪೇಟೆ, ಡಿ.11: ನಾಳೆ ಕೊಡಗು ಬಂದ್ ಇರುವ ಹಿನ್ನಲೆಯಲ್ಲಿ ಮಕ್ಕಳ, ಶಿಕ್ಷಕರ ಮತ್ತು ಶಾಲಾಸಿಬ್ಬಂಧಿಗಳ ಹಿತ ರಕ್ಷಣೆಯನ್ನು ಮನದಲ್ಲಿ ಇಟ್ಟುಕೊಂಡು ಜಿಲ್ಲೆಯ ಎಲ್ಲಾ ಖಾಸಗಿ ಅನುದಾನರಹಿತ ಶಾಲೆಗಳಿಗೆ ದಿನಾಂಕ 12/12/2024ನೇ ಗುರುವಾರ ಅನ್ವಯ ಆಗುವಂತೆ ರಜೆ ನೀಡಲು, ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಮುಂದುವರಿದು, ಆಯಾ ಶಾಲಾ ಆಡಳಿತ ಮಂಡಳಿಗಳು ತಮ್ಮ ವಿವೇಚನೆಯಂತೆ ತೀರ್ಮಾನ ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಕೋಳೆರ ಝರುಗಣಪತಿ ಮತ್ತು ಪ್ರಧಾನ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಡುಬಾಡೆಯೊಂದಿಗೆ ಮಾತನಾಡಿದ, ಕೋಳೆರ ಝರುಗಣಪತಿ ಹಾಗೂ ಕೋಟ್ರಂಗಡ ತಿಮ್ಮಯ್ಯ ಅವರುಗಳು, ಮಾಸೇನಾನಿಗಳ ವಿರುದ್ದದ ಹೇಳಿಕೆಯನ್ನು ಯಾರೂ ಸಹಿಸಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರದ್ದೂ ಒಕ್ಕೊರಲ ಖಂಡನೆ ಇದೆ. ಆದರೆ ಹೋರಾಟದ ರೂಪು ರೇಷೆಗಳು ತಯಾರಾಗುವಾಗ ಪೂರ್ವಭಾವಿ ಚರ್ಚೆಗಳು ಅಷ್ಟೇ ಮುಖ್ಯ ಎಂದರು.
ವಿಧ್ಯಾರ್ಥಿಗಳಿಗೆ ಆಗಬಹುದಾದ ತೊಂದರೆಯ ಕುರಿತು ನಡುಬಾಡೆ ಕಳವಳವ್ಯಕ್ತ ಪಡಿಸಿದ ಕೆಲ ಸಮಯದಲ್ಲೇ ಪರಿಸ್ಥಿತಯ ಗಂಭೀರತೆಯನ್ನ ಅರ್ಥಮಾಡಿಕೋಮಡು ರಜೆ ಘೋಷಿಸಿದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ.