ವಿರಾಜಫೇಟೆ, ನ.24: ವೀರಾಸೇನಾನಿಗಳನ್ನು ಅವಮಾನಿಸಿದ್ದ ಕುಟೀಲ ವಕೀಲ ದೇಶದ್ರೋಹಿ ವಿದ್ಯಾಧರ ಎಂಬವನ್ನನ್ನು ಮಡಿಕೇರಿ ವಕೀಲರ ಸಂಘ ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದು ದೇಶಭಕ್ತರಿಗೆ ಮತ್ತು ಈತನ ವಿರುದ್ದದ ಹೋರಾಟಗಾರಿಗೆ ಸಂದ ಮೊದಲ ವಿಜಯವಾಗಿದೆ.
ಕಳೆದ ಮೂರು ದಿನದಿಂದ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ, ಪೋಲೀಸರು ಸಂಗ ಸಂಸ್ಥೆಗಳು ದೂರು ನೀಡುವ ಮೊದಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮಾಡಿ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲು ಪ್ರಾಮಾಣೀಕ ಪ್ರಯತ್ನ ಮಾಡಿದ್ದರು. ಪೊಲೀಸರ ಅವರಿತ ಶ್ರಮದ ಹೊರತಾಗಿಯೂ ಕುಟಿಲ ಕೂಟದ ಕೈಚಳಕದ ಪ್ರಭಾವದಿಂದ, ದಿಢೀರನೆ ಹಾಜರಾದ APP ಪೊಲೀಸರ ರಿಪೊರ್ಟ್ ಇಲ್ಲದೆಯೇ ಸ್ವಯಂ ಪ್ರೇರಿತರಾಗಿ ಬೇಲ್ ಕೊಡಲು ತನ್ನ ತಗಾದೆ ಸಲ್ಲಿಸಿಬಿಡುತ್ತಾರೆ. ನ್ಯಾಯಾಲಯ ನಿಯಮಾನುಸಾರ ಜಾಮೀನು ಮಂಜೂರು ಮಾಡುತ್ತದೆ. ಇತ್ತ ಪೋಲೀಸರು ಒಂದೀಡೀ ದಿನದ ಶ್ರಮಕ್ಕೆ ಬೆಲೆ ಇಲ್ಲದಾಯಿತಲ್ಲ ಎಂದು ಮರುಗಿದರೆ, ದೇಶಭಕ್ತ ಹೋರಾಟಗಾರರಿಗೆ, ದೇಶ ದ್ರೋಹಿಯೊಬ್ಬ ಇಷ್ಟು ಸಲೀಸಾಗಿ ಜಾಮೀನು ಪಡೆಯಬಹುದಾ ಎಂಬ ಆತಂಕ ತಳಮಳ, ಆದರೆ ಈ ನಾಡ ದ್ರೋಹಿ ನ್ಯಾಯಾಲಯದ ಹೊರ ಆವರಣದ ಕುರ್ಚಿಯ ಮೇಲೆ, ಕಾಲಮೇಲೆ ಕಾಲು ಹಾಕಿ, ಮೊಬೈಲ್ ನೋಡುತ್ತಾ ಗಹಗಹಿಸಿ ನಗುತ್ತಾನೆ. ಇನ್ನು ಈತನ ಕುಟಿಲ ಕೂಟ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ, ಎಂದಿನ ತನ್ನ ಕಣ್ಣೊರೆಸುವ ಚಾಳಿ ಮತ್ತು ತಾನು ತಿಂದು ಮತ್ತೊಬ್ಬರ ಮೇಲೆ ಒರೆಸಿದಂತೆ ನಾಟಕವನ್ನ ಮುಂದುವರೆಸುತ್ತದೆ.
ಇಂದು ವಕೀಲರ ಸಂಘ ಈತನ್ನನ್ನ ಅಮಾನತು ಮಾಡುವ ಮೂಲಕ, ಪೊಲೀಸರ ಪ್ರಾಮಾಣಿಕ ಪ್ರಯತ್ನ ಮತ್ತು ಅಸಂಖ್ಯಾತ ದೇಶಭಕ್ತರ ಮಡುಗಟ್ಟಿದ ನೋವಿಗೆ ಮೊದಲ ಮುಲಾಮ್ ಹಚ್ಚಿದಷ್ಟೇ ಸಂತೋಷವಾಗಿದೆ. ಸಮಯೋಜಿತ ಕ್ರಮಕ್ಕಾಗಿ ವಕೀಲರ ಸಂಘಕ್ಕೆ ಧನ್ಯವಾದಗಳು.
ಇದು ಕಾವೇರಿ ಮಣ್ಣು ಈ ಪವಿತ್ರ ನೆಲ ದ್ರೋಹಿಯನ್ನು ದ್ರೋಹಿಯಾಗಿಯೇ ನೋಡಿದೆ ವಿನಃ ಆತನ ಜಾತಿ, ಧರ್ಮದ ವಿರುದ್ದ ದ್ವೇಶ ಮಾಡಿಲ್ಲ. ಮುಂದೆ ಮಾಡೋದೂ ಇಲ್ಲ ಅನ್ನೋ ನಂಬಿಕೆಯೂ ಇದೆ. ಅದೇ ಕಾರಣಕ್ಕೆ ನಾವು ಆತನ ಅಧಿಕೃತ ಹೆಸರಿನ ಹಿಂದೆ ಮುಂದೆ ಆತನ ಕುಟುಂಬ ಮತ್ತು ಜನಾಮಗದ ಸೂಚಕಗಳಿದ್ದರೂ ನಾವು ಪ್ರಕಟಿಸುದಿಲ್ಲ. ಕಾರಣ ವ್ಯಕ್ತಿಯ ಹೀನತನಕ್ಕೆ ಸಮೂಹವೇ ಮರುಗಬಾರದು ಎಂಬ ಉದ್ದೇಶವಷ್ಟೆ.
ಈ ನೀಚ ಮತ್ತವನ ಕುಟಿಲ ತಂಡಕ್ಕೆ ಮೊದಲ ಪೆಟ್ಟು ಅವರ ಕರ್ಮದ ಮೇಲೆ ಸಿಕ್ಕಿದೆ. ಬಾಕಿ ಉಳಿದದ್ದು ಖಂಡಿತ ಮುಂದೆ ಇದೆ ಅನ್ನೋ ಸೂಚನೆ ಸಿಕ್ಕಿದೆ. ಕಾದು ನೋಡೋಣ.