ಮಡಿಕೇರಿ. ಅ.4: ಮಡಿಕೇರಿ ದಸರದಂದು ದಶಮಂಟಪಗಳು ನಡೆಸುವ ಶೋಭಾಯತ್ರೆಯಲ್ಲಿ ಅಧಿಕ ಶಬ್ದ ಮಾಡುವ ಡಿಜೆ, ಮತ್ತು ಪ್ರಖರ ಬೆಳಕು ಹಾಯಿಸುವ ಲೇಸರ್ ಲೈಟ್ಗಳನ್ನು ನಿಷದಿಸಬೇಂದು ದಶಮಂಟಪ ಸಮಿತಿ ಮತ್ತು ಡಿ.ಜೆ., ಲೈಟ್ ಸಿಸ್ಟಮ್ ಮಾಲೀಕರಿಗೆ ವಕೀಲರಿಂದ ನೋಟೀಸ್ ನಢಲಾಗಿದೆ.
ವಕೀಲರಾದ ಅಮೃತೇಶ್ ಅವರು , ಡಿ.ಎನ್.ಎ. ಲೀಗಲ್ ಸಂಸ್ಥೆಯ ಮೂಲಕ ಎಲ್ಲಾ ದಶಮಂಟಪ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಎಲ್ಲಾ DJ, ಸೌಂಡ್ & ಲೈಟ್ ಸಿಸ್ಟಮ್ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದು, ಅನಾರೋಗ್ಯ ಪೀಡಿತರು, ಗರ್ಬಿಣೀಯರು, ಮಕ್ಕಳು, ವಯೋವೃದ್ದರು ಮತ್ತು ಪ್ರಕೃತಿಯ ಇತರ ಜೀವ ಸಂಕುಲದ ಹಿತ ದೃಷ್ಟಿಯಿಂದ ಡಿಜೆ ಮತ್ತು ಲೇಸರ್ ಕಿರಣಗಳನ್ನು ಸಂಪೂರ್ಣವಾಗಿ ನಿಷೇದಿಸಬೇಕು ಎಂದಿದ್ದಾರೆ.
2023ರಲ್ಲೂ ಕೂಡ ಇದೇ ವಿಚಾರಕ್ಕೆ ಅಮೃತೇಶ್ ಅವರು ಮಾದ್ಯಮ ಗೋಷ್ಟಿ ನಡೆಸಿ ಆಗ್ರಹಿಸಿದ್ದರಲ್ಲದೆ, ಸಂಭಂದಿಸಿದ ಇಲಾಖೆಗಳಿಗೂ ದೂರು ನೀಡಿದ್ದರು. ಆದರೂ ಕೂಡ ಕೆಲ ಮಂಟಪಗಳು ಡಿಜೆ ಮತತು ಲೇಸರ್ ಬಳಸಿದ್ದನ್ನು ಉಲ್ಲೇಖಿಸಿರುವ ವಕೀಲರು, ನಂತರ ಕೆಲ ಮಂಡಪ ಸಮಿತಿಯವರು ತಪ್ಪೊಪ್ಪಿಕೊಂಡು ದಂಡ ಪಾವತಿಸಿದನ್ನು ಪ್ರಸ್ತಾಪಿಸಿದ್ದಾರೆ.
ಇಷ್ಟೆಲ್ಲ ಆದರೂ 2024ರಲ್ಲಿ ಕೊಡಗು ಜಿಲ್ಲೆಯ ವಿವಧ ಭಾಗಗಳಲ್ಲಿ ನಡೆದ ಗಣೇಶೋತ್ಸವದಲ್ಲೂ, ಪೊಲೀಸ್ ಇಲಾಖೆಯ ಸೂಚನೆಯ ಹೊರತಾಗಿಯೂ ಕೂಡ ಡಿಜೆ ಮತ್ತು ಲೇಸರ್ ಬಳಸಿದ್ದನನು ಗಮನಿಸಿದ್ದು, ಇದು ಸುಪ್ರಿಒ ಕೋರ್ಟ್ ಮತ್ತು ರಾಜ್ಯ ಉಚ್ಚ ನ್ಯಾಯಾಲಯಗಳ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.
ಈ ಎಲ್ಲಾ ಕಾರಣಗಳಿದ ಈ ಭಾರಿಯ ದಸರದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಮತ್ತು ಲೇಸರ್ ಬಳಸಬಾರದು, ತಪ್ಪಿದಲ್ಲಿ ನ್ಯಾಯಾಂಗ ನಿಂದನೆಯಡಿ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.
ಹಬ್ಬ ಹರಿದಿನ ಉತ್ಸವಗಳು, ಪರಿಸರಕ್ಕೆ ಪೂರಕವಾಗಿ, ಭಕ್ತಿ ಮತ್ತು ಆಹ್ಲಾಧಕರವಾಗಿ ನಡೆಯಬೇಕೇ ಹೊರತು, ಜನಸಾಮಾನ್ಯರ ಆರೋಗ್ಯ, ಮತ್ತು ಪರಿಸರಕ್ಕೆ ಮಾರಕವಾಗಿರ ಬಾರದು. ಆದರೆ ಕೆಲ ಮಂಟಪಗಳು ದೇವರ ಉತ್ಸವವನ್ನು ತಮ್ಮ ಪ್ರತಿಷ್ಟೆಗೆ ಬಳಸಿಕೊಳ್ಳುತಿದ್ದು, ಇದು ಮುಂದುವರಿ ಯಬಾರದು. ಪರಿಸರ ಸ್ನೇಹಿ ಮತ್ತು ಆರೋಗ್ಯಕ್ಕೆ ಪೂರಕವಾಗಿ, ಉತ್ಸವವು ಅದ್ದೂರಿಯಾಗಿ ನಡೆಯಲಿ ಎಂದು ಕೋರಿದ್ದಾರೆ.