ವಿರಾಜಪೇಟೆ:ಡಿ:12: (ಕಿಶೋರ್‌ಕುಮಾರ್ ಶೆಟ್ಟಿ) ದಂತ ವೈಧ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಹೊಸ ಅವಿಸ್ಕಾರಗಳನ್ನು ಹುಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು ಕೊಲ್ಗೇಟ್ ಪಾಮ್ ಲೀವ್ ಕಂಪೇನಿಯ ನಿರ್ಧೇಶಕರ ಮಂಡಳಿಯ ನಿಕಟ ಪೂರ್ವ ಅದ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿನೋದ್ ನಂಬೀಯರ್ ಅವರು ಅಭಿಮತ ವ್ಯಕ್ತಪಡಿಸಿದರು.
ಕೊಡಗು ದಂತ ವೈಧ್ಯಕೀಯ ಮಾಹವಿದ್ಯಾಲಯ ವಿರಾಜಪೇಟೆ ವತಿಯಿಂದ 25ನೇ ಪದವಿಪ್ರಧಾನ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ವಿನೋದ್ ನಂಬೀಯರ್ ಅವರು, ದಂತ ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ, ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡುವತ್ತ ಗಮನ ಹರಿಸಬೇಕು. ಪದವಿ ಪಡೆದು ಒಂದೇ ಸ್ಥಳದಲ್ಲಿರದೆ. ದಂತ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಬೇಕು. ವಿದ್ಯಾರ್ಥಿಗಳು ದಂತ ವೈಧ್ಯಕೀಯ ಕ್ಷೇತ್ರದಲ್ಲಿ ಪ್ರಸ್ತುತ ಕೃತಕ ಬುದ್ದಿಮತ್ತೆ, ಡಿಜಿಟಲ್ ಡೆಂಟಸ್ಟ್ರಿಗಳನ್ನು ಕಲಿಯುವ ಪ್ರಯತ್ನ ಮಾಡಬೇಕು ಈ ವಿಭಾಗಗಳಲ್ಲಿ ಕಲಿಸುವ ಉಪನ್ಯಾಸಕರು ಇಲ್ಲ, ಅದರೇ ನಾವೇ ಖುದ್ದಾಗಿ ಕಲಿತು ಇತರರಿಗೆ ತಿಳಿಯಪಡಿಸಬೇಕು. ಹೆಚ್ಚು ಹೆಚ್ಚು ಪ್ರಯತ್ನ ಮಾಡಿದಲ್ಲಿ ಮಾತ್ರ ಮುಂದೊಂದು ದಿನ ಸಫಲತೆಯನ್ನು ಕಾಣಬಹುದಾಗಿದೆ ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಭಾರತೀಯ ದಂತ ವೈಧ್ಯಕೀಯ ಸಂಸ್ಥೆ ವಿಶೇಷ ಒಲಂಪಿಕ್ಸ್ ಮತ್ತು ದಂತ ಕ್ರೀಡಾ ವೈಧ್ಯಕೀಯಶಾಸ್ತೃದ ರಾಷ್ಟೀಯ ನಿರ್ಧೇಶಕರಾದ ಡಾ. ರೀನಾ ರಂಜಿತ್ ಕುಮಾರ್ ಅವರು ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿ, ಪದವಿ ಪಡೆದು ಸುಮ್ಮನಾಗದೆ ಸಮಾಜಕ್ಕೆ ಒಳಿತು ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ದಂತ ವೈಧ್ಯಕೀಯ ಕ್ಷೇತ್ರದಲ್ಲಿ ದಾರ್ಶನಿಕವಾಗಿ ಹೊಸ ಪ್ರಯೋಗ ಅವಿಸ್ಕಾರಗಳ ಬಗ್ಗೆ ಅಧ್ಯಯನ ಮಾಡುವಂತಾಗಬೇಕು. ಕೆಲವೊಂದು ಕ್ರೀಡೆಗಳಲ್ಲಿ ದಂತಗಳಿಗೆ ಹೆಚ್ಚು ಘಾಸಿಯಾಗುವುದನ್ನು ಮನಗಂಡಿದ್ದೇವೆ. ಅದರಂತೆ ಕ್ರೀಡಾ ದಂತ ವೈಧ್ಯಕೀಯ ಶಾಸ್ತ್ರದ ಬಗ್ಗೆ ಕಲಿಯಲು ಉತ್ಸುಕರಾಗಬೇಕು. ರಾಷ್ಟ್ರ ಮಟ್ಟದ ಉನ್ನತ ದಂತ ವೈಧ್ಯಕೀಯ ಕಾಲೇಜುಗಳಲ್ಲಿ ಕೊಡಗು ದಂತ ವೈಧ್ಯಕೀಯ ಕಾಲೇಜು ಗುರುತಿಸಿಕೊಂಡಿರುವುದು ಶ್ಲಾಘನೀಯ, ಎಂದರು.
ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಡೀನ್ ಡಾ. ಕಂಜಿತಂಡ ಸುನೀಲ್ ಮುದ್ದಯ್ಯ ಅವರು ಮಾತನಾಡಿ, ದಂತ ವೈಧ್ಯಕೀಯ ಕಾಲೇಜು ಸ್ಥಾಪನೆಯಾಗಿ 25ನೇ ವರ್ಷದ ಪದವಿ ಪ್ರದಾನ ಸಮಾರಂಭ ನಡೆಯುತ್ತಿದೆ.. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮೌಲ್ಯಾಧರಿತ ಶಿಕ್ಷಣ ನೀಡುತ್ತಾ 25 ಸಂವತ್ಸರಗಳನ್ನು ಪೂರೈಸಿದೆ. ಏಷೀಯ ಉಪ ಖಂಡ ಸೇರಿದಂತೆ ಅಂತರ ರಾಷ್ಟೃ ಮಟ್ಟದಲ್ಲಿ, ಇತರ ದೇಶಗಳ ದಂತ ವೈಧ್ಯಕೀಯ ಮಾಹಾ ವಿದ್ಯಾಲಯಗಳೋಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ದಂತ ಶಾಸ್ತ್ರದ ಮಾಹಿತಿಗಳನ್ನು ಪೂರೈಸಿಕೊಂಡು ಬಂದಿದೆ. ನಿಗಧಿತ ವಿದ್ಯಾರ್ಥಿಗಳನ್ನು ಮಾತ್ರ ದಾಲಿಸಿಕೊಂಡು ಗುಣಮಟ್ಟದ ಶಿಕ್ಷಣ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಸಮಾಜಕ್ಕೆ ಉತೃಷ್ಟವಾದ ವೈಧ್ಯರನ್ನು ಕೊಡುಗೆಯಾಗಿ ನೀಡಬಹುದಾಗಿದೆ. ಕಾಲೇಜಿನ ಕ್ರೀಡಾ ದಂತ ವೈಧ್ಯಕೀಯ ಶಾಸ್ತ್ರದ ವಿಭಾಗವನ್ನು ಆರಂಭಿಸುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಕೊಡಗು ದಂತ ವೈಧ್ಯಕೀಯ ಮಾಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಕೆ.ಸಿ.ಪೊನ್ನಪ್ಪ ಅವರು ವಿಧ್ಯಾರ್ಥಿಗಳಿಗೆ ಪ್ರಮಾಣವಚನ ಭೋದಿಸಿದರು. ಉಪ ಪ್ರಾಂಶುಪಾಲರಾದ ಡಾ. ಜಿತೇಶ್‌ಜೈನ್ ಮತ್ತು ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ವಿಧ್ಯಾರ್ಥಿಗಳಿಂದ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳು ಮೂಡಿಬಂದವು. ಒಟ್ಟು 26 ಮಂದಿಗೆ ಸ್ನಾತ್ತಕೋತ್ತರ ಪದವಿ ಪ್ರಧಾನ ಮತ್ತು 40 ಮಂದಿ ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಡಾ. ಕೊಕ್ಕಲೇರ ಕುಂಕುಂ ನಾಣಯ್ಯ ಮತ್ತು ಡಾ. ಕವನಾ ಪಿ ಅವರಿಗೆ ಕಂಜಿತಂಡ ಎಂ. ಕುಶಾಲಪ್ಪ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೆ. ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಶೈಕ್ಷಣಿಕ ಸಾಧನೆಗಾಗಿ ಡಾ. ಲೀಥೀಯಾ ಸಕ್ರೀಯ ಅವರು ಪಡೆದುಕೊಂಡರು.
ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಶಶಿಧರ್ ಅವರು ಸರ್ವರನ್ನು ಸ್ವಾಗತಿಸಿದರು. ವಿಧ್ಯಾರ್ಥಿ ಸಮರ್ಥ್ ಕಾರ್ಯಪ್ಪ ನಿರೂಪಿಸಿ ವಂದಿಸಿದರು.
ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಗು ದಂತ ವೈದ್ಯಕೀಯ ಮಾಹಾವಿದ್ಯಾಲಯದ ಉಪನ್ಯಾಸಕರು, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಸ್ನಾತಕೋತ್ತರ ವಿಧ್ಯಾರ್ಥಿಗಳು, ಪದವಿ ಪಡೆದ ವಿಧ್ಯಾರ್ಥಿಗಳು ಸೇರಿದಂತೆ, ವಿದ್ಯಾರ್ಥಿಗಳ ಪೊಷಕರು ಹಾಜರಿದ್ದರು.