https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

News, Informatin , Enteetinement and Advertisement
17/06/202517/06/2025nadubadenews@gmail.comLeave a Comment on ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ
Spread the love
ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

ವಿರಾಜಪೇಟೆ ಜೂ.17, (nadubadenews): ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ವಿರಾಜಪೇಟೆಯ ಗಡಿಯಾರ ಕಂಬದ ಸಮೀಪದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿಗೆ ಕೊನೆಗೂ ತಾತ್ಕಾಲಿಕ ಮುಕ್ತಿ ದೊರಕಿದೆ.  ಪ್ರತಿದಿನ ನೀರು ಮತ್ತು ಕೆಸರು ತುಂಬಿ ನಡೆದಾಡಲು ಕಷ್ಟಕರವಾಗುತ್ತಿತ್ತು. ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು, ಅತಿಯಾಗಿ ಈ ಕಾಲುದಾರಿಯಲ್ಲಿ ಸಂಚಾರ ಮಾಡುತ್ತಾರೆ. ಈ ಕುರಿತು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿತ್ತು. ಇದಿಗ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಸಲಹೆಯಂತೆ ಸದಸ್ಯ ಎಸ್.ಎಚ್. ಮತೀನ್ ಕೇರಳದ ಕೆಂಪು ಕಲ್ಲುಗಳನ್ನು ಕಾಲದಾರಿಗೆ ಹಾಕಿಸಿ ನೆಡೆದಾಡಲು ಅನುಕೂಲವಾಗುವಂತೆ ಮಾಡಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಮತೀನ್ ಅವರು ಖಾಸಗಿ ಸ್ಥಳದ ಮಾಲೀಕರಲ್ಲಿ ಸ್ಥಳ ನೀಡುವಂತೆ ಹಲವು ಬಾರಿ ಪುರಸಭೆ ವತಿಯಿಂದ ಮನವಿ ಮಾಡಲಾಗಿತ್ತು. ಆದರೆ ಈವರೆಗೂ ಸ್ಥಳ ಪುರಸಭೆಗೆ ಹಸ್ತಾಂತರ ಮಾಡಿರುವುದಿಲ್ಲ. ಮತ್ತೊಮ್ಮೆ ಮನವಿ ಮಾಡುವ ಪ್ರಯತ್ನ ಮಾಡುತ್ತೇವೆ, ಸ್ಥಳ ದೊರಕಿದಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುತ್ತದೆ, ಸದ್ಯದ ಮಟ್ಟಿಗೆ ಕೆಂಪು ಕಲ್ಲು ಬಳಸಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಮಾಡಲಾಗಿದೆ ಎಂದು ತಿಳಿಸಿದರು. ತಾತ್ಕಾಲಿಕ ಪರಿಹಾರ ಕಂಡಿರುವ ಕಾಲುದಾರಿ ಶಾಸ್ವತ ಪರಿಹಾರಕ್ಕಾಗಿ ಕಾಯುವಂತಾಗಿದೆ.

Post navigation

ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…
ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

Related Posts

ಮಂಗಳವಾರ  ಸಬ್ ರಿಜಿಸ್ಟ್ರಾರ್  ಕಚೇರಿಗೆ ರಜೆ…

ಮಂಗಳವಾರ  ಸಬ್ ರಿಜಿಸ್ಟ್ರಾರ್  ಕಚೇರಿಗೆ ರಜೆ…

28/05/202528/05/2025nadubadenews@gmail.com
ಮಡಿಕೇರಿ ಕೊಡವ ಸಮಾಜತ್‌ ಕಕ್ಕಡ ಒತ್ತೋರ್ಮೆ ಕೂಟ; ಮತ್ಯಾಂದ್‌ ನಾರಾಚೆ

ಮಡಿಕೇರಿ ಕೊಡವ ಸಮಾಜತ್‌ ಕಕ್ಕಡ ಒತ್ತೋರ್ಮೆ ಕೂಟ; ಮತ್ಯಾಂದ್‌ ನಾರಾಚೆ

31/07/202531/07/2025nadubadenews@gmail.com
ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಆಯ್ಕೆ…

ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ  ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪ ಆಯ್ಕೆ…

26/04/202526/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us