https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

News, Informatin , Enteetinement and Advertisement
22/07/202522/07/2025nadubadenews@gmail.comLeave a Comment on ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ
Spread the love
ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಗೆ ಅರ್ಜಿ ಆಹ್ವಾನ

ಮಡಿಕೇರಿ ಜು.22(nadubadenews):-ಸರ್ಕಾರದ ಅಧೀನ ಕಾರ್ಯದರ್ಶಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆದೇಶದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೌಶಲ್ಯಾಭಿವೃದ್ಧಿ ಸರ್ಕಾರ ಅಧೀನ ಕಾರ್ಯದರ್ಶಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರು ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಅಧಿನಿಯಮ 2014 ಮತ್ತು ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮ 2019 ರಲ್ಲಿ ತಿಳಿಸಿರುವಂತೆ ‘ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ’ ರಚನೆ ಮಾಡುವಂತೆ ಆದೇಶ ನೀಡಿರುತ್ತಾರೆ.
ಆದೇಶದಲ್ಲಿ ತಿಳಿಸಿರುವಂತೆ ವ್ಯಾಪ್ತಿಯೊಳಗಡೆ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರ ಸ್ಥಾನಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ನಗರದ ವ್ಯಾಪ್ತಿಯೊಳಗಡೆ ಕನಿಷ್ಠ 5 ವರ್ಷಗಳು ಬೀದಿ ಬದಿ ವ್ಯಾಪಾರದಲ್ಲಿ ತೊಡಗಿದ್ದು, ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜಕೀಯ ರಹಿತ ಬೀದಿ ಬದಿ ವ್ಯಾಪಾರಸ್ಥರ ಸಂಘ ಅಥವಾ ಒಕ್ಕೂಟದ ಸದಸ್ಯರುಗಳಿಂದ ಮೀಸಲಾತಿ ಪ್ರಕಾರ 4 ಸಾಮಾನ್ಯ, 3 ಪರಿಶಿಷ್ಟ ಜಾತಿ, 1 ಪರಿಶಿಷ್ಟ ಪಂಗಡ, 3 ಅಲ್ಪಸಂಖ್ಯಾತರು, 6 ಮಹಿಳೆ ಮತ್ತು 1 ವಿಕಲಚೇತರನರು. ಕೇಂದ್ರ ಸರ್ಕಾರ ಪುರಸ್ಕøತ ಡೇ ನಲ್ಮ್/ಡಿಜೆಎವೈ-ಎಸ್ ಯೋಜನೆಯ ಅಡಿಯಲ್ಲಿ ಸ್ಥಾಪಿತಗೊಂಡಿರುವ ಮಹಿಳಾ ಎಎಲ್‍ಎಫ್/ಎಸ್‍ಎಚ್‍ಜಿ. ಕನಿಷ್ಠ 5 ವರುಷಗಳಿಂದ ಸಮಾಜ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ/ ಸಮಾಜ ಕಾರ್ಯಕರ್ತರು, ಸೇವಕರು ಬೀದಿ ಬದಿ ವ್ಯಾಪಾರಿಗಳೊಂದಿಗೆ ಕಾರ್ಯನಿರ್ವಹಿಸುವ ಸಂಸ್ಥೆಗೆ ಆದ್ಯತೆ. ಟ್ರೇಡ್ ಯೂನಿಯನ್ ಪ್ರತಿನಿಧಿಗಳು, ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿ ಹಾಗೂ ಮಾರುಕಟ್ಟೆ ಅಥವಾ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿ. ಮಡಿಕೇರಿ ನಗರಸಭೆ ವ್ಯಾಪ್ತಿಯೊಳಗಡೆ ಆಸಕ್ತರು ಜುಲೈ, 23 ರ ಸಂಜೆ 5 ಗಂಟೆ ಒಳಗಡೆ ಸ್ವಯಂ ಲಿಖಿತ ಅರ್ಜಿಯನ್ನು ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಕೋರಿದ್ದಾರೆ.

Post navigation

ಕಾವೇರಮ್ಮೆನ ತೊತ್ತಿತ್ ಪೈಪೋಟಿಕ್ ಇಳ್ಂಜ ಬಾಳೆಯಡ ಕರುಣ್ ಕಾಳಪ್ಪ, ಕೂಟ್‌‌ಕಾರ…
ಅರೆಭಾಷೆ ಗೌಡ ಜನಾಂಗಕ್ಕೆ ಅನುಕೂಲ ಮಾಡಿದ್ದು  ಕಾಂಗ್ರೆಸ್‌ ಮಾತ್ರ; ಸೂರ್ತಲೆ ಸೋಮಣ್ಣ ಅಭಿಮತ

Related Posts

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

13/06/202513/06/2025nadubadenews@gmail.com
ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

21/02/202521/02/2025nadubadenews@gmail.com
 ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಕೂಟತ ತೀನಿ ನಮ್ಮೆ ಕಕ್ಕಡ 18ಕ್‌

 ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಕೂಟತ ತೀನಿ ನಮ್ಮೆ ಕಕ್ಕಡ 18ಕ್‌

30/07/202530/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version