ಮಡಿಕೇರಿ ಮೇ.23(Nadubade News): ಪ್ರಸಕ್ತ (2025-26) ನೇ ಸಾಲಿಗೆ ಮಡಿಕೇರಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಒಳಪಡುವ ಕಕ್ಕಬ್ಬೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಇಲ್ಲಿ 1 ರಿಂದ 5 ನೇ ತರಗತಿ ವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉಚಿತ ಸಮವಸ್ತ್ರ, ಉಚಿತ ಬ್ಯಾಗ್, ಉಚಿತ ದಾಖಲಾತಿ(ಶುಲ್ಕ ರಹಿತ) ಲೇಖನ ಸಾಮಾಗ್ರಿ, ಹಾಸ್ಟೇಲ್ ಸೌಲಭ್ಯ, ಮೆನು ಪ್ರಕಾರ ಪೌಷ್ಟಿಕ ಆಹಾರ ಪೂರೈಕೆ, ನುರಿತ ಶಿಕ್ಷಕರಿಂದ ಬೋಧನೆ, ತಿಂಗಳಿಗೆ ಉಚಿತ ‘ಶುಚಿ ಸಂಭ್ರಮ ಕಿಟ್’ (ಸೋಪು, ಪೇಸ್ಟ್, ಬ್ರಷ್, ತೆಂಗಿನ ಎಣ್ಣೆ) ಹಾಗೂ ಆರೋಗ್ಯ ತಪಾಸಣೆ ವ್ಯವಸ್ಥೆ ಇರುತ್ತದೆ.
ಆಸಕ್ತ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಕಕ್ಕಬ್ಬೆ, ಮಡಿಕೇರಿ ತಾಲ್ಲೂಕು ಇಲ್ಲಿಂದ ಅರ್ಜಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ವಾಸಸ್ಥಳ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಹಿಂದಿನ ತರಗತಿ ಅಂಕಪಟ್ಟಿಯನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಮುಖ್ಯ ಶಿಕ್ಷಕರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಕಕ್ಕಬ್ಬೆ ದೂ.ಸಂ.7259195450 ಹಾಗೂ ಸಹಾಯಕ ನಿರ್ದೇಶಕರು (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿನ ಕಚೇರಿ ದೂ.ಸಂ.08272-223552 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.