Site icon nadubadenews.com

ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …
ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

      ಕುಶಾಲನಗರ, ಏ.14: [ಟಿ.ಜಿ.ಪ್ರೇಮ್‌ಕುಮಾರ್] ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ  ಶೃತಿ .ಎಸ್. ಮಂಜುನಾಥ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿಯನ್ನು ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಂದ ಪಡೆದುಕೊಂಡರು.

 ಮಂಗಳೂರು ವಿಶ್ವವಿದ್ಯಾನಿಲಯದ ರಾಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕಿ ಪ್ರೊಫೆಸರ್ ಬಿ. ವಿಶಾಲಾಕ್ಷಿ ಅವರ ಮಾರ್ಗದರ್ಶನದಲ್ಲಿ “ಹೈಬ್ರೀಡ್ ಪಾಲಿಮರ್ ನ್ಯಾನೋಕೋಪೋಸೈಟ್ಸ್  ಸಿಂಥೆಸೀಸ್ ಕ್ಯಾರಕ್ಟರೈಷೇಶನ್ಸ್ ಅಂಡ್ ಅಪ್ಲಿಕೇಶನ್ಸ್” ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.  ಸೋಮವಾರಪೇಟೆಯ ಪುಷ್ಪಾ ಎಸ್ ಸಾಲಿಯಾನ್ ಅವರ ಮಗಳಾದ ಶೃತಿ, ಚಿಕ್ಕ ಅಳುವಾರ ಗ್ರಾಮದ ಸಿ. ಕೆ. ಉದಯ್ ಕುಮಾರ್ ಮತ್ತು ಮಾದೇವಿ ದಂಪತಿಯ ಸೊಸೆಯಾಗಿದ್ದಾರೆ.

Exit mobile version