
ಮಡಿಕೇರಿ,ಜು.30; (nadubadenews): ಜೂನಿಯರ್ ಇಂಡಿಯಾ ಮಹಿಳಾ ಹಾಕಿ ಪಂದ್ಯಾಟಕೆ ಆಲೇಮಾಡ ತ್ರಿಷಾ ಕಾವೇರಮ್ಮ ಪಾಂಡಿಚೇರಿ ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ.
15ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025 ಪಂದ್ಯಾಟವು, ಆಗಸ್ಟ್ 1 ರಿಂದ 12ರವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ತ್ರಿಷಾ ಕಾವೇರಮ್ಮ ಪಾಂಡಿಚೇರಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು 2021ರಿಂದ 2024ರ ವರೆಗೆ ಪೊನ್ನಂಪೇಟೆ DYSS ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಹಾಗೂ ಮುಕಳಾಮಾಡ ಗಣಪತಿಯವರಲ್ಲಿ ತರಬೇತಿ ಪಡೆದು, ಪ್ರಸ್ತುತ ಮಡಿಕೇರಿ SAI ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಾ ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ಪ್ರಥಮ PUC ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪೊನ್ನಂಪೇಟೆ ತಾಲೂಕು ಮುಗುಟಗೇರಿ ಗ್ರಾಮದ ಅಲೇಮಾಡ ನವೀನ್ ದೇವಯ್ಯ ಹಾಗೂ ಧನ್ಯ (ತಾಮನೆ ಪೆಮ್ಮಂಡ ) ದಂಪತಿಯ ಪುತ್ರಿ.