https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.

ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.

news News, Informatin , Enteetinement and Advertisement
13/06/202513/06/2025nadubadenews@gmail.comLeave a Comment on ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.
Spread the love
ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.

ವಿರಾಜಪೇಟೆ, ಜೂ.13:(nadubadenews): ಕೊಡಗು ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಇರುವ ಕಾರಣ, ಅಂಗನವಾಡಿ ಶಾಲಾಕಾಲೇಜುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಡಿ.ಸಿ. ವೆಂಕಟರಾಜ ಅವರ ನಿರ್ಧಾರ ಸಮಯೋಚಿತವಾಗಿದ್ದು, ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತಿದ್ದಾರೆ.

ಹವಾಮಾನ ಇಲಾಖೆ ಕೊಡಗಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಈ ಮಳೆಗಾಲದಲ್ಲಿ ಕೊಡಗು ಅತ್ಯಂತ ಅಪಾಯಕಾರಿ ಸನ್ನಿವೇಶ ಎದುರಿಸಬೇಕಾಗಬಹುದು ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಮಾನ್ಯ ಮುಖ್ಯ ಮಂತ್ರಿಗಳೂ ಕೂಡ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ. ಎಲ್ಲಕಿಂತಲೂ ನಾವು ಗಮನಿಸಿದ ಕೊಡಗಿನ ಪರಿಸರ ಹಿಂದಿನಂತಿಲ್ಲ. ಹಿಂದೆಲ್ಲ ನಿರ್ದಿಷ್ಟ ಸಮಯದ ಮಳೆಗಾಳಿ ಬಿಸಿಲಿನ ವಾತಾವರಣವನ್ನು ಗಮನಿಸಬಹುದಿತ್ತು, ಆದರೆ ಇಂದು ಯಾವ ಕ್ಷಣದಲ್ಲಿ ಏನಾಗಲಿದೆಯೋ ಗೊತ್ತಿಲ್ಲ. ಈಗಾಗಲೇ ರಣಭೀಕರ ಪ್ರವಾಹ, ಭೂಕುಸಿತಗಳನ್ನು ಎದರಿಸಿದ್ದೇವೆ. ಕಳೆದ 18/07/24ರಂದು ನಡುಮಧ್ಯಾಹ್ನ ವಿರಾಜಪೇಟೆಯಲ್ಲಿ ಆದ ಮೇಘಸ್ಪೋಟದಂತ ರಣಮಳೆಗೆ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿಯೇ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. ಈ ವರ್ಷದ ಮಳೆಗಾಲ ಆರಂಭದಲ್ಲೇ ಸಾವುನೋವುಗಳನ್ನು ಕಂಡಿರುವ ಕೊಡಗು ಮುನ್ನೆಚ್ಚರಿಕೆ ವಹಿಸಿದಷ್ಟೂ ನಮಗೊಳಿತು.   

ಅದರ ಜೊತೆಗೆ ಹಲವು ಕಡೆ ಕೊರೋನ ಹೆಚ್ಚಳ ಆಗುವ ಸೂಚನೆ ಇದೆ. ವಾತವಾರಣ ವೈಪರಿತ್ಯದಿಂದ ಸಾಮಾನ್ಯವಾಗಿ ಶೀತ ಜ್ವರ ಇದ್ದದ್ದೇ ನಿಜ, ಒಂದು ವೇಳೆ ಅದೇ ಸಾಂಕ್ರಮಿಕವಾಗಿ ಮಾರ್ಪಟ್ಟರೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಹವಾಮಾನ ಇಲಾಖೆಯ ಸೂಚನೆಯನ್ನು ದಿಕ್ಕರಿಸಿ ಮುಜಾಗೃತಾ ಕ್ರಮ ಕೈಗೊಳ್ಳದೇ ಇದ್ದು, ಅನಾಹುತವೇನಾದರೂ ಸಂಭವಿಸಿದರೆ ನೇರಾ ನೇರಾ ಹೊಣೆಗಾರರು ಜಿಲ್ಲಾಧಿಕಾರಿಗಳೇ.   ಈಗಾಗಲೇ ಸಾಲು ಸಾಲು ಅನಾಹುತಗಳನ್ನು ಕಂಡಿರುವ ನಾವು ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಕೈಜೋಡಿಸಬೇಕಿದೆ.

ಮಕ್ಕಳಿಗೆ ರಜೆ ವ್ಯರ್ಥವಾದರೂ ತೊಂದರೆ ಇಲ್ಲ, ಸುರಕ್ಷಿತವಾಗಿದ್ದಾರೆ ಅಷ್ಟು ಸಾಕು, ಉಳಿಕೆ ತರಗತಿಗಳನ್ನು ಶನಿವಾರ ಪೂರ್ತಿ ದಿನ ಮಾಡಲಿ, ಹೇಗೂ ಶಾಲೆಗೆ ಹೋಗಿದ್ದೇ ಇರುತ್ತದೆ ಒಂದೆರಡು ಘಂಟೆ ಹೆಚ್ಚುವರಿ ತರಗತಿ ನಡೆದರೆ ಅಡ್ಡಿಯಿಲ್ಲ. 

          ಇಡೀ ಮಳೆಗಾಲ  ಯಾವುದೇ  ದುರ್ಘಟನೆಗಳು ನಡೆಯದೆ ಸುರಕ್ಷಿತವಾಗಿ ಕಳೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಅಧಿಕಾರಿಗಳು ಮತ್ತು ಸರ್ಕಾರದೊಂದಿಗೆ  ನಾವೂ ಕೈಜೋಡಿಸೋಣ.

Post navigation

ಗೋಣಿಕೊಪ್ಪ ಪಾರ್ಕಿಂಗ್‌ ಸ್ಥಳದಲ್ಲಿ ಗಂಟೆಟ್ಟಲೆ ವಾಹನ ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…
ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

Related Posts

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

ಕಾರ್ಮಿಕ ಸೋಗಿನ ನುಸುಳುಕೋರರ ಬಗ್ಗೆ ಎಚ್ಚರ ವಹಿಸಿ, ಎಸ್.ಪಿ ರಾಮರಾಜನ್ ಸೂಚನೆ…

03/07/202503/07/2025nadubadenews@gmail.com
ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

ಎರಡು ವರ್ಷ ಪೂರೈಸಿದ ರಾಜ್ಯ ಸರ್ಕಾರ ಮತ್ತು ಹೆಮ್ಮೆಯ ಶಾಸಕರಿಗೆ ಶುಭಾಷಯಗಳು

20/05/202520/05/2025nadubadenews@gmail.com

ಸೇನಾ ನೇಮಕಾತಿ ಅರಿವು ಕಾರ್ಯಾಗಾರ ಮೇ 10ರಂದು ತಾಳತ್ತಮನೆಯಲ್ಲಿ …

05/05/202505/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version