Site icon nadubadenews.com

ಜಾಮೀನು ಪಡೆದು ನಿರಾಳರಾದ ನಾಚಪ್ಪ

ಜಾಮೀನು ಪಡೆದು ನಿರಾಳರಾದ ನಾಚಪ್ಪ
Spread the love
ಜಾಮೀನು ಪಡೆದು ನಿರಾಳರಾದ ನಾಚಪ್ಪ

    ಮಡಿಕೇರಿ, ಜ.24:  ವಿವಾದಾತ್ಮಕ ಹಾಗೂ ಜನಾಂಗ ನಿಂದನೆಯ ಆರೋಪದಲ್ಲಿ ಪ್ರಕರಣ ಎದುರಿಸಿತಿದ್ದ ಸಿ.ಎನ್.ಸಿ. ಅದ್ಯಕ್ಷ ನಂದಿನೆರವಂಡ ನಾಚಪ್ಪ ಅವರಿಗೆ ಜಿಲ್ಲಾ ಶೆಷನ್ಷ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.   ಕೆಲ ದಿನಗಳ ಹಿಂದೆ, ಜಿಲ್ಲೆಯ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅವರು, ಜನಾಂಗೀಯ ನಿಂದನಾತ್ಮಕ ಹೇಳಿಕೆ ಹರಿಬಿಟ್ಟಿದ್ದಾರೆಂದು ಆರೋಪಿಸಿ, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದರು. ನಂತರ ನಾಚಪ್ಪ ಬಂಧನಕ್ಕೆ ಹಲವು ಒತ್ತಡ, ಪ್ರತಿಭಟನೆಗಳು ನಡೆದರೆ, ಮತ್ತೊಂದೆಡೆ  ಹಲವು ಸಂಘಟನೆ, ಸಮಾಜಗಳು  ನಾಚಪ್ಪ ಪರ ನಿಂತಿದ್ದವು.

ಇದೀಗ ನ್ಯಾಯಾಲಯ ನಾಚಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದು, ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರೆಯಲಿದೆ.

ಪ್ರಕರಣ ದಾಖಲಾದಾಗಿನಿಂದ ಸಂಯಮದಿಂದ ಶಾಂತಚಿತ್ತರಾಗಿದ್ದ ನಾಚಪ್ಪ ಅವರು, ನ್ಯಾಯಾಲಯದ ಆದೇಶದಿಂದ ಮತ್ತಷ್ಟು ನಿರಾಳರಾಗಿದ್ದು, ಕೊಡವ ಜನಾಂಗಕ್ಕಾಗಿ ತಮ್ಮ ಸಂವಿಧಾನಬದ್ದ ಹೋರಾಟ ಮುಂದುವರೆಯಲಿದೆ ಎಂದು ಸಂಘಟನೆ ತಿಳಿಸಿದೆ.

Exit mobile version